ಕಡಬ ಸೇರಿದಂತೆ 49 ಹೊಸ ತಾಲೂಕುಗಳು ಜನವರಿ 01 ರಿಂದ ಅಸ್ತಿತ್ವಕ್ಕೆ ► ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

(ನ್ಯೂಸ್ ಕಡಬ) newskadaba.com ಬೆಳಗಾವಿ, ನ.21. ಈಗಾಗಲೇ ಘೋಷಣೆ ಮಾಡಿರುವ 49 ಹೊಸ ತಾಲ್ಲೂಕುಗಳು ಜನವರಿ 1 ರಿಂದ ಅಸ್ತಿತ್ವಕ್ಕೆ ಬರಲಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರಿದಿದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ಸಿನ ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೊಸ ತಾಲ್ಲೂಕುಗಳ ರಚನೆಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಹಣಕಾಸನ್ನು ಒದಗಿಸಲಾಗಿದೆ ಎಂದರು.

ಇದರೊಂದಿಗೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿಯನ್ನು ಹೊಸ ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು. ಕೆಲವು ಶಾಸಕರು ಇನ್ನೂ ಹೊಸ ತಾಲ್ಲೂಕುಗಳ ರಚನೆ ಕುರಿತು ಬೇಡಿಕೆ ಮಂಡಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಾಗೋಡು ಭರವಸೆ ನೀಡಿದ್ದಾರೆ.

Also Read  ಮಹಿಳೆಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲ ಉಂಡೆ ► ಹೇಗೆ ಅಂತಿರಾ...???

error: Content is protected !!
Scroll to Top