ಹಾರ ಬದಲಿಸಿ ವಧುವಿಗೆ ಮುತ್ತಿಟ್ಟ ವರ..! ➤ ಮದುವೆಯನ್ನೇ ರದ್ದುಪಡಿಸಿದ ಯುವತಿ

(ನ್ಯೂಸ್ ಕಡಬ) newskadaba.com ಲಕ್ನೋ, ಡಿ. 01. ಮದುವೆ ಸಮಾರಂಭದಲ್ಲಿ ವಧು- ವರರು ಹಾರ ಬದಲಿಸಿದ್ದು, ಬಳಿಕ ಎಲ್ಲರ ಸಮ್ಮುಖದಲ್ಲೇ ವರ ವಧುವಿಗೆ ಮುತ್ತು ಕೊಟ್ಟಿದ್ದು, ಇದರಿಂದ ಬೇಸರಗೊಂಡ ಯುವತಿ ಮದುವಯನ್ನೇ ರದ್ದುಮಾಡಿದ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ನವೆಂಬರ್ 26ರಂದು ಉ.ಪ್ರ.ದ ಸಂಭಾಲ್ ನಗರದಲ್ಲಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರಲ್ಲಿ ಬಿಲ್ಸಿ ಗ್ರಾಮಕ್ಕೆ ಸೇರಿದ ಯುವಕ ಹಾಗೂ ಬಹ್ಜೋಯ್ ಠಾಣಾ ವ್ಯಾಪ್ತಿಯ ಯುವತಿಯು ವೈವಾಹಿಕ ಜೀವನಕ್ಕೆ ಕಾಲಿಡಲು ಆಗಮಿಸಿದ್ದರು. ಮದುವೆ ಸಂಪ್ರದಾಯಗಳನ್ವಯ ವರ ವಧುವಿಗೆ ಹಾರ ಹಾಕಿದ ಬಳಿಕ ಮುತ್ತು ನೀಡಿದ್ದರಿಂದ ಕೋಪಗೊಂಡ ಯುವತಿಯು ಮದುವೆಯನ್ನೇ ರದ್ದು ಮಾಡಿದ್ದಾಳೆ. ಇದರಿಂದ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಎರಡೂ ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ನಡೆಸಿದ ರಾಜಿ ಪಂಚಾಯಿತಿಯಲ್ಲಿ ಯುವತಿ ತಾನು ಯುವಕನನ್ನು ಮದುವೆ ಆಗೋದೆ ಇಲ್ಲ ಎಂದು ಪಟ್ಟು ಹಿಡಿದ ಕಾರಣ ಮದುವೆಯನ್ನೇ ರದ್ದುಪಡಿಸಲಾಗಿದೆ‌.

Also Read  ಖಾಸಗಿ ಬಸ್ - ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ ➤ ಲಾರಿ ಚಾಲಕ ಸಜೀವ ದಹನ | ವಾಹನಗಳೆರಡೂ ಸುಟ್ಟು ಭಸ್ಮ

error: Content is protected !!
Scroll to Top