ಬಿಳಿನೆಲೆ: ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ನ. 29. ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಕಾಡಿಗೆ ತೆರಳಿ ವಿಷಪದಾರ್ಥ ಸೇವನೆ ಮಾಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬಿಳಿನೆಲೆ ಗ್ರಾಮದಿಂದ ವರದಿಯಾಗಿದೆ.

 


ಮೃತಪಟ್ಟವರನ್ನು ಬಿಳಿನೆಲೆ ಗ್ರಾಮದ ಕಾಳಪ್ಪಾಡಿ ನಿವಾಸಿ ತಿಲೇಶ್ ಯಾನೆ ತುಕಾರಾಂ ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಪತ್ನಿಯೊಂದಿಗೆ ಸಣ್ಣ ಪುಟ್ಟ ಕಾರಣಕ್ಕೆ ಗಲಾಟೆ ಮಾಡಿ ಮನೆಯಿಂದ ಹೊರ ಹೋದವರು ಮರಳಿ ಮನೆಗೆ ಬಾರದೇ ಇದ್ದು, ಹುಡುಕಾಟ ನಡೆಸಿದಾಗ ಮನೆಯಿಂದ ಸುಮಾರು ನೂರು ಮೀಟರ್ ದೂರದ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಇವರು ಕಾಡಿನಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರಬಹುದು ಎಂದು ರಾಘವೇಂದ್ರ ಡಿ.ಎಸ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಳ್ಳಾರಿಯಲ್ಲಿ ಚುನಾವಣಾ ಕಣಕ್ಕಿಳಿದ ರೆಡ್ಡಿ ಬ್ರದರ್ಸ್..! ➤ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ

error: Content is protected !!
Scroll to Top