ಹುಡುಗಿಯೊಂದಿಗೆ ಆಂಬ್ಯಲೆನ್ಸ್ ನಲ್ಲಿ ಸೈರನ್ ಹಾಕಿ ಹೋದವನಿಗೆ ಬಿತ್ತು ಗೂಸಾ

(ನ್ಯೂಸ್ ಕಡಬ) newskadaba.com ತುಮಕೂರು, ನ.20. ಆ್ಯಂಬುಲೆನ್ಸ್ ನಲ್ಲಿ ರೋಗಿಗಳಿಲ್ಲದಿದ್ದರೂ ಹುಡುಗಿಯೋರ್ವಳನ್ನು ಕರೆದುಕೊಂಡು ಚಾಲಕ ಸೈರನ್ ಹಾಕಿ ವೇಗವಾಗಿ ಚಲಾಯಿಸಿ ಕಾರಿಗೆ ಢಿಕ್ಕಿ ಹೊಡೆದು ಸಾರ್ವಜನಿಕರಿಂದ ಥಳಿಸಿಕೊಂಡ ಘಟನೆ ರವಿವಾರದಂದು ನಗರದ ಅಂತರಸನಹಳ್ಳಿ ಸೇತುವೆ ಬಳಿ ನಡೆದಿದೆ.

ಬೆಳಧರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಆ್ಯಂಬುಲೆನ್ಸ್ ನ ಚಾಲಕ ತನ್ನ ಪಕ್ಕದ ಸೀಟಿನಲ್ಲಿ ಯುವತಿಯೊಬ್ಬಳನ್ನು ಕುಳ್ಳಿರಿಸಿಕೊಂಡು ಸೈರನ್ ಹಾಕಿಕೊಂಡು ವೇಗವಾಗಿ ಬೆಳಧರ ಕಡೆಯಿಂದ ತುಮಕೂರಿಗೆ ತೆರಳುತ್ತಿರುವಾಗ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದಿದೆ. ಆ್ಯಂಬುಲೆನ್ಸ್‌ ಚಾಲಕನ ಬೇಜವಾಬ್ದಾರಿ ವರ್ತನೆಗೆ ಕುಪಿತರಾದ ಸಾರ್ವಜನಿಕರು ಆತನಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಪೇಂಟಿಂಗ್ ಮಾಡುವ ವೇಳೆ 3ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು..!

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top