ಶಾಲಾ ಬಿಸಿ ಊಟದಲ್ಲಿ ಕಾಣಿಸಿಕೊಂಡ ಹುಳ! ಪಾಲಕರಿಂದ ಆಕ್ರೋಶ

ಬಿಸಿ ಊಟ ತಯಾರಿಕೆಗೂ ಮುನ್ನ ಅಕ್ಕಿ ಅನ್ನ ಮಾಡಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸಬೇಕು. ಅಲ್ಲದೆ ಚೆನ್ನಾಗಿ ತೊಳೆದು ಅಕ್ಕಿಯನ್ನು ಶುಚಿಗೊಳಿಸಬೇಕು. ಆದರೆ ಕಲಬುರುಗಿಯಲ್ಲಿ ಮಕ್ಕಳು ತಿನ್ನುವ  ಅನ್ನದಲ್ಲಿ ಹುಳು ಸಿಕ್ಕಿದೆ.

ಈ ಘಟನೆಯು ಜಿಲ್ಲೆಯ ಚಿತ್ತಾಪುರ ತಾಲೂಕಿ‌ನ ಸನ್ನತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್​ 22.ರಂದು  ಮಧ್ಯಾಹ್ನ ನಡೆದಿದೆ.

ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಕೆಲವರ ತಟ್ಟೆಯಲ್ಲಿ ಹುಳಗಳು ಕಾಣಿಸಿಕೊಂಡಿವೆ ಇದನ್ನು ಗಮನಿಸಿದ ವಿದ್ಯಾರ್ಥಿಗಳು ಅನ್ನ ಚೆಲ್ಲುವುದರ ಮೂಲಕ ಬಿಸಿ ಊಟ ತಯಾರಿಸುವ ಸಿಬ್ಬಂದಿಯ ನಿರ್ಲಕ್ಷದ ಕುರಿತು ಕಿಡಿಕಾರಿದ್ದಾರೆ.

Also Read  ಬಿಸಿಲಿನ ಬೇಗೆಗೆ ಜನ ತತ್ತರ..!   ➤ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆ.!

error: Content is protected !!
Scroll to Top