(ನ್ಯೂಸ್ ಕಡಬ) newskadaba.com ನವದೆಹಲಿ, ನ.22. ಚಿನ್ನದ ಬೆಲೆಯು ದಿನೇ ದಿನೇ ಗಗನಕ್ಕೇರುತ್ತಿದ್ದು, ಇಂದು ಅಲ್ಪ ಮಟ್ಟಿಗೆ ಇಳಿಕೆಯಾಗಿದೆ.
ಎರಡು ದಿನಗಳ ಹಿಂದೆ ಗ್ರಾಂ ಒಂದಕ್ಕೆ 4860 ರೂ. ಗಳಿದ್ದ ಚಿನ್ನದ ದರವು, ಇಂದು 25 ರೂ. ಇಳಿಕೆಯಾಗುವ ಮೂಲಕ 4835 ರೂ.ಗಳಿಗೆ ಬಂದು ನಿಂತಿದೆ. ಕಳೆದ ಕೆಲವು ಸಮಯಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಿದ್ದು, ಹೂಡಿಕೆದಾರರನ್ನು ಕಂಗೆಡಿಸಿದೆ.
