(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.19. ಪದೇ ಪದೇ ಅಪಘಾತ ಸಂಭವಿಸಿ ಪ್ರಾಣ ಹಾನಿಗೆ ಕಾರಣವಾಗಿದ್ದ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿಯ ಅಲಂಗ ಎಂಬಲ್ಲಿನ ಅಪಾಯಕಾರಿ ಮರ ಮತ್ತು ವಿದ್ಯುತ್ ಕಂಬವನ್ನು ನೀತಿ ತಂಡದ ವತಿಯಿಂದ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ಭಾನುವಾರದಂದು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ, ಸಂತೋಷ್, ನೆಲ್ಯಾಡಿ ಮೆಸ್ಕಾಂ ಜೆ.ಇ.ಇ ರಮೇಶ್, ಇಚ್ಲಂಪ್ಪಾಡಿ ಲ್ಯೆನ್ ಮ್ಯಾನ್ ಮನೋಜ್, ಗುತ್ತಿಗೆದಾರ ಮತ್ತು ವಿ.ಕೆ ಎಲೆಕ್ಟ್ರಿಕಲ್ ನ ಬಿಜು ಮತ್ತು ಹಾಗೂ ಸಿಬ್ಬಂದಿಗಳು ವಿದ್ಯುತ್ ಕಂಬವನ್ನು ತೆರವುಗೊಳಿಸುವಲ್ಲಿ ಮತ್ತು ಮರ ತೆರವುಗೊಳಿಸಲು ಸಹಕರಿಸಿದರು.
ತಂಗಚ್ಚನ್ ಅಲಕ್ಕಿ, ಅಧ್ಯಾಪಕರಾದ ಜೋಸೆಫ್, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಕೆ. ಇಬ್ರಾಹಿಂ, ಮಾಜಿ ಪಂಚಾಯತ್ ಸದಸ್ಯ ಅಬ್ರಹಾಂ ಬೆಂಬಲ ನೀಡಿದರು.
ನೀತಿ ತಂಡದ ರಾಜ್ಯಾಧ್ಯಕ್ಷರಾದ ಜಯನ್ ಟಿ ಅವರು ಮಾತನಾಡುತ್ತಾ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ವರ್ತನೆಯಿಂದ ಜನರು ಇಂದು ಬೀದಿಗೆ ಬರುವಂತಾಗಿದೆ. ಈ ರಸ್ತೆಯ ಪೂರ್ಣ ಅಭಿವೃದ್ಧಿ ಕಾಣದೇ ನಾವು ವಿರಮಿಸಲ್ಲ ಎಂದರು. ಈ ತೆರವು ಕಾರ್ಯಕ್ರಮದಲ್ಲಿ ಕಡಬ ನೀತಿ ತಂಡದ ಅಧ್ಯಕ್ಷರಾದ ರಂಜಿತ್, ಇಚಿಲಂಪಾಡಿಯ ಸುರೇಶ್ ಗೋಪಿನಾಥ್, ರವಿ, ರೆನೀಶ್, ಶ್ರೀನಾಥ್, ಉಮೇಶ್, ಆನಂದ್ ಮುರತಡ್ಕ, ಅಕ್ಷಿತ್ ಮುಂತಾದವರು ಭಾಗವಹಿಸಿದ್ದರು. ಇಚ್ಲಂಪ್ಪಾಡಿಯ ಆರ್.ಕೆ ಟ್ರೇಡರ್ಸ್ ನವರು ಪಾನೀಯ ವ್ಯವಸ್ಥೆ ಮಾಡಿದ್ದರು.