ವಿಎಲ್​ಸಿ ಮೀಡಿಯಾ ಪ್ಲೇಯರ್ ನಿಷೇಧ ವಾಪಸ್‌ ಪಡೆದ ಸರ್ಕಾರ

(ನ್ಯೂಸ್ ಕಡಬ) newskadaba.com ನ.15: VideoLAN ಯೋಜನೆಯಿಂದ ಅಭಿವೃದ್ಧಿಪಡಿಸಲಾದ ವಿಶ್ವದ ಅತ್ಯಂತ ಜನಪ್ರಿಯ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಸರ್ವರ್ ವಿಎಲ್​ಸಿ ಪ್ಲೇಯರ್ (VLC Media Player) ನಿಷೇಧವನ್ನು ಭಾರತದ ಸರ್ಕಾರ ತೆಗದುಹಾಕಿದೆ. ಒಂಬತ್ತು ತಿಂಗಳ ಹಿಂದೆ ಕೆಲವು ಕಾರಣಾಂತರಗಳಿಂದ ಭಾರತ ಸರ್ಕಾರ ಈ ಆ್ಯಪ್‌ಗೆ ನಿರ್ಬಂಧ ವಿಧಿಸಿತ್ತು. ಆದರೀಗ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಈ ಮೂಲಕ ಭಾರತದಲ್ಲಿನ ಜನರು ಇನ್ಮುಂದೆ ವಿವಿಧ ಫೀಚರ್ಸ್‌ ಇರುವ ವಿಎಲ್‌ಸಿ ಆ್ಯಪ್‌ ಅನ್ನು ಇನ್​ಸ್ಟಾಲ್ ಉಪಯೋಗಿಸಬಹುದು.

ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ವಿಎಲ್​ಸಿ ಮೀಡಿಯಾ ಪ್ಲೇಯರ್ ನಿರ್ಬಂಧಿಸಲಾಗಿತ್ತು. ನಿಷೇಧದ ಬಗ್ಗೆ ಕಂಪನಿ ಅಥವಾ ಭಾರತ ಸರ್ಕಾರ ಇದುವರೆಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ www.videolan.org ವೆಬ್ ಸೈಟ್ ಅನ್ನು ಭಾರತ ಸರ್ಕಾರ ನಿರ್ಬಂಧಿಸಿರುವುದಾಗಿ ವಿವರಿಸಿತ್ತಷ್ಟೆ.

Also Read  ಈ ರೀತಿಯಲ್ಲಿ ದೀಪ ಬೆಳಗಿಸಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತವೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ


ಬಳಿಕ ಕಳೆದ ಅಕ್ಟೋಬರ್‌ನಲ್ಲಿ ವಿಎಲ್‌ಸಿ ಮಾಲೀಕರು ಭಾರತ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದರು. ಅದರಂತೆ ಭಾರತದಲ್ಲಿ ನಮ್ಮ ಸೇವೆಯನ್ನು ಏಕೆ ನಿಷೇಧಿಸಲಾಗಿದೆ?, ಈ ಬಗ್ಗೆ ವರ್ಚುವಲ್ ವಿಚಾರಣೆಯ ಮೂಲಕ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಸದ್ಯ ಈ ಮನವಿಗೆ ಸ್ಪಂದಿಸಿರುವ ಭಾರತ ಸುಮಾರು 73 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಿಎಲ್‌ಸಿ ಪ್ಲೇಯರ್ ಮೇಲಿನ ನಿಷೇಧವನ್ನು ತೆಗೆದು ಹಾಕಿದೆ.

error: Content is protected !!
Scroll to Top