ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ ಬಿಸಿತಟ್ಟಿದೆ. ಪೆಟ್ರೋಲ್, ಡಿಸೇಲ್ ಆಯ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಕೂಡ ಏರಿಕೆ ಆಯ್ತು, ಎಲ್ಲಾ ಬೆಲೆಗಳು ಗಗನಕ್ಕೇರಿರುವಾಗಲೇ ಸರ್ಕಾರ ಹಾಲಿನ ದರ (Milk Rate) ಕೂಡ ಹೆಚ್ಚಳ ಮಾಡಿದ್ದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ನಾಳೆಯಿಂದ ಹಾಲಿನ ದರ ಹೆಚ್ಚಳ ಮಾಡಿರುವುದಾಗಿ KMFಅಧಿಕೃತ ಮಾಹಿತಿ ನೀಡಿದೆ. ನಾಳೆಯಿಂದ ಪ್ರತಿ ಲೀ. ಹಾಲಿನ ದರ 3 ರೂಪಾಯಿ ಹೆಚ್ಚಳವಾಗಲಿದೆ.
ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್; ಹಾಲು, ಮೊಸರಿನ ದರದಲ್ಲಿ ಭಾರೀ ಹೆಚ್ಚಳ!
