ಬುಡೋಕಾನ್ ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಶಿಪ್‌ ➤‌ ಹುಡುಗಿಯರ ವಿಭಾಗದಲ್ಲಿ ಕಡಬದ ನೈಮಾ ಸಾರಾ ವರ್ಗೀಸ್ ದ್ವಿತೀಯ

(ನ್ಯೂಸ್ ಕಡಬ) newskadaba.com ಕಡಬ, ನ.08. ಬುಡೋಕಾನ್ ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಕಡಬದ ಕುಟ್ರುಪ್ಪಾಡಿಯ ನೈಮಾ ಸಾರಾ ವರ್ಗೀಸ್ ಅವರು ವೈಯಕ್ತಿಕ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ನವೆಂಬರ್ ತಿಂಗಳ 4 ರಿಂದ 6 ರ ವರೆಗೆ ಉಡುಪಿಯಲ್ಲಿ ನಡೆದ ಬುಡೋಕಾನ್ ಚಾಂಪಿಯನ್ ಶಿಪ್ ನಲ್ಲಿ 9 ರಿಂದ 10 ವಯಸ್ಸಿನ ಹುಡುಗಿಯರ ನೀಲಿ ಹಾಗೂ ನೇರಳೆ ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಕಡಬ ತಾಲೂಕಿನ ಕುಟ್ರುಪ್ಪಾಡಿ ಅರಪುರಕ್ಕಲ್ ನಿವಾಸಿ ನಿವೃತ ಸೈನಿಕ ವರ್ಗೀಸ್ ಸ್ರೀನಿಯವರ ಪುತ್ರಿಯಾಗಿದ್ದಾರೆ‌.

Also Read  ಬಾಲಶಕ್ತಿ ಪುರಸ್ಕಾರ ಮತ್ತು ಬಾಲ ಕಲ್ಯಾಣ ಪುರಸ್ಕಾರಕ್ಕೆ ➤ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

error: Content is protected !!
Scroll to Top