ರಕ್ತವರ್ಣ ಚಂದ್ರ ಗ್ರಹಣ ಎಲ್ಲೆಲ್ಲಿ ಸಂಭವಿಸುತ್ತೆ?

(ನ್ಯೂಸ್ ಕಡಬ) newskadaba.com ನ.08: ನಭೋಮಂಡಲದಲ್ಲಿ ಇಂದು ವಿಸ್ಮಯವೊಂದು ನಡೆಯಲಿದೆ. ತಂಪಾದ ಆಕಾಶದಲ್ಲಿ ಬೆಳದಿಂಗಳಂತೆ ಮಿನುಗುತ್ತಿದ್ದ ಚಂದ್ರ(Moon) ರಕ್ತದಂತೆ ಕೆಂಪಾಗಿ ಕಾಣಿಸಿಕೊಳ್ಳಲಿದ್ದಾನೆ. ಕಳೆದ ಅಮಾವಾಸ್ಯೆಯಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಹದಿನೈದು ದಿನಗಳ ಅಂತರದಲ್ಲಿ ಚಂದ್ರಗ್ರಹಣವು ಸಂಭವಿಸುತ್ತಿದೆ. ಈ ಎರಡೂ ಗ್ರಹಣಗಳು ಒಂದೇ ಮಾಸದಲ್ಲಿ ಅಂದ್ರೆ ಕಾರ್ತೀಕ ಮಾಸದಲ್ಲಿ ಬಂದಿದ್ದು ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ.

ಇಂದು ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. ಸಂಜೆ 4 ಗಂಟೆ 28 ನಿಮಿಷಕ್ಕೆ ಗ್ರಹಣ ಮಧ್ಯಕಾಲ ತಲುಪಲಿದ್ದು, ಸಂಜೆ 6 ಗಂಟೆ 17 ನಿಮಿಷ ಚಂದ್ರಗ್ರಹಣ ಅಂತ್ಯವಾಗಲಿದೆ. ಈ ಬಾರಿ ಈ ರಕ್ತ ಚಂದ್ರಗ್ರಹಣವು ಭಾರತದೆಲ್ಲಡೆ ಗೋಚರಿಸಲಿದೆ. ಭಾರತದ ಕೆಲವು ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಚಂದ್ರಗ್ರಹಣವು ಗೋಚರವಾದ್ರೆ ಕೆಲವಡೆ ಗ್ರಹಣಾಂತ್ಯದ ವೇಳೆ ಕಾಣಿಸಲಿದೆ,ಅಂದ್ರೆ ಮೋಕ್ಷದ ಸಮಯದಲ್ಲಿ ಕಾಣಿಸಲಿದೆ. ಅಗರ್ತಲ, ಭುವನೆಶ್ವರ್, ಡಾರ್ಜಲಿಂಗ್, ಗುವಹಾಟಿ, ಪೋರ್ಟ್ ಬ್ಲೇರ್ ಹಾಗೂ ಉತ್ತರ ಭಾರತದ ಮತ್ತಲವು ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣ ಗೋಚರಿಸಲಿದೆ. ಅಂತೆಯೇ ಕರ್ನಾಟಕದಲ್ಲೂ ಪಾರ್ಶ್ವ ಚಂದ್ರಗ್ರಹಣವು ಸಂಭವಿಸಲಿದೆ. ಸರಿ ಸುಮಾರು ಸಂಜೆ ಆರು ಗಂಟೆ ವೇಳೆಗೆ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಚಂದ್ರಗ್ರಹಣವು ಗೋಚರಿಸಲಿದೆ.

Also Read  ಕೊನೆಗೂ ಭಾರತದಲ್ಲಿ ಬಿಡುಗಡೆಯಾಯ್ತು ಬಹು ನಿರೀಕ್ಷಿತ ಬೈಕ್ ► ಟಿವಿಎಸ್ ಅಪಾಚಿ ಆರ್ ಆರ್ 310


error: Content is protected !!
Scroll to Top