ಡಿಸೆಂಬರ್‌ನಲ್ಲಿ ಕಡಬದಲ್ಲಿ ನಡೆಯಲಿದೆ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ► ಸಮ್ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.19. ದ.ಕ. ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಡಿಸೆಂಬರ್ 16 ರಂದು ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಪುತ್ತೂರು ತಾಲೂಕು 17 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಶನಿವಾರ ನಡೆಯಿತು.

ಶ್ರೀ ದುರ್ಗಾಂಬಿಕಾ ಅಮ್ಮನವರಿಗೆ ಪೂಜೆ ಸಲ್ಲಿಸಿದ ಬಳಿಕ ಹಿರಿಯ ಸಾಹಿತಿ ಬಿ.ವಿ.ಅರ್ತಿಕಜೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತಮಾಡಿ, ಹಿಂದೊಮ್ಮೆ ಕಡಬದಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆದಿದ್ದು, ಗತ ವೈಭವ ಮತ್ತೊಮ್ಮೆ ಮರುಕಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದೆ ಕಡಬ ಪೂರ್ಣಪ್ರಮಾಣದ ತಾಲೂಕು ಕೇಂದ್ರವಾಗಲಿರುವುದರಿಂದ ಅವಿಭಜಿತ ಪುತ್ತೂರು ತಾಲೂಕಿನ ಕೊನೆಯ ತಾಲೂಕು ಸಾಹಿತ್ಯ ಸಮ್ಮೇಳನ ಇದಾಗಲಿದೆ. ಮುಂದೆ ಕಡಬದಲ್ಲಿ ಪ್ರತ್ಯೇಕ ಸಾಹಿತ್ಯ ಸಮ್ಮೇಳನಗಳು ವಿಜೃಂಭಿಸಲಿದೆ ಎಂದು ಶುಭ ಹಾರೈಸಿದರು.

Also Read  ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ


ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಐತ್ತಪ್ಪ ನಾಯ್ಕ್, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮಹಮ್ಮದ್ ಕುಂಞಿ, ಗೌರಾಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಉಪಾಧ್ಯಕ್ಷರಾದ ಪಿ.ಸಾಂತಪ್ಪ ಗೌಡ ಪಿಜಕಳ, ಇ.ಸಿ.ಚೆರಿಯನ್ ಬೇಬಿ, ಎಸ್.ಅಬ್ದುಲ್ ಖಾದರ್, ಕಾರ್ಯದಶರ್ಿ ರಾಮಕೃಷ್ಣ ಮಲ್ಲಾರ, ಕೋಶಾಧಿಕಾರಿ ಗಣೇಶ್ ಕೈಕುರೆ, ಆಹಾರ ಸಮಿತಿಯ ಸಂಚಾಲಕ ಸತೀಶ್ ನಾಕ್ ಮೇಲಿನಮನೆ, ಸ್ಮರಣ ಸಚಿಕೆ ಸಮಿತಿಯ ಸಂಚಾಲಕ ಮಾಯಿಲಪ್ಪ ಜಿ, ತಾಲೂಕು ಸಾಹಿತ್ಯ ಸಮ್ಮೇಳನದ ನಿಕಟಪೂವರ್ಾಧ್ಯಕ್ಷ ಹರಿನಾರಾಯಣ ಮಾಡಾವು, ವಿವಿಧ ಸಮಿತಿಗಳ ಪ್ರಮುಖರಾದ ಶಿವರಾಮ ಗೌಡ ಎಂ.ಎಸ್, ವಾಸುದೇವ ಗೌಡ ಕೋಲ್ಪೆ, ದಯಾನಂದ ಉಂಡಿಲ, ಅಶೋಕ್ ಕುಮಾರ್ ರೈ ವಜ್ರಪಾಣಿ, ಸಂಜೀವ ರೈ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.

Also Read  ಸೆ.​ 30ರೊಳಗೆ ಆಸ್ತಿ ಘೋಷಿಸದಿದ್ದರೆ ಸಂಬಳವಿಲ್ಲ- ರಾಜ್ಯ ಸರ್ಕಾರ ಆದೇಶ

error: Content is protected !!
Scroll to Top