(ನ್ಯೂಸ್ ಕಡಬ) newskadaba.com ನ.02: ಆ್ಯಪಲ್ ಮೊಬೈಲ್‌ಗಳೇ ದುಬಾರಿ ಎನ್ನುವಾಗ, ವಜ್ರಗಳನ್ನು ಅಳವಡಿಸಿರುವ ಸುಂದರವಾದ ಆ್ಯಪಲ್ ಮೊಬೈಲ್ ಒಂದನ್ನು ಐಷಾರಾಮಿ ವಸ್ತುಗಳಿಗೆ ಖ್ಯಾತಿ ಹೊಂದಿರುವ ರಷ್ಯಾದ ಕೇವಿಯರ್ ಕಂಪನಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ನ ಬೆಲೆ ಸುಮಾರು 1 ಕೋಟಿ ರುಪಾಯಿ. ರೋಲೆಕ್ಸ್ ಡೆಟೋನಾ ವಾಚ್‌ಗಳ ವಿನ್ಯಾಸ ಮಾಡಿದ್ದ ಮಾಲ್ಕಂ ಕ್ಯಾಂಪ್‌ಬೆಲ್ ಈ ಮೊಬೈಲ್‌ನ ಹೊರ ವಿನ್ಯಾಸ ಮಾಡಿದ್ದಾರೆ. ಈ ಮೊಬೈಲ್‌ನ ಹಿಂಭಾಗದಲ್ಲಿ 8 ವಜ್ರದ ಹರಳುಗಳನ್ನು ಒಳಗೊಂಡಿರುವ ರೋಲೆಕ್ಸ್ ಡೇಟೋನಾ ವಾಚ್ ಅಳವಡಿಸಲಾಗಿದೆ. ಈ ಮಾದರಿಯ ಸೀಮಿತ ಸಂಖ್ಯೆಯ ಮೊಬೈಲ್‌ಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕೇವಿಯರ್ ಕಂಪನಿ ಹೇಳಿದೆ.
ಆ್ಯಪಲ್ ಅಧಿಕೃತ ವೆಬ್‌ಸೈಟ್‌ನಲ್ಲಿ 1 ಟಿಬಿ ಸ್ಟೋರೇಜ್ ಹೊಂದಿರುವ ಆ್ಯಪಲ್ 14 ಪ್ರೋ ಮ್ಯಾಕ್ಸ್‌ನ ಟಾಪ್ ಮಾಡೆಲ್‌ಗೆ 1,89,900 ರೂ. ವೆಚ್ಚವಾಗುತ್ತದೆ. ಇತರೆ, ಫೋನ್‌ಗಳಿಗೆ ಹೋಲಿಸಿದರೆ ಈ ಫೋನ್ ದರ ತುಂಬಾ ಹೆಚ್ಚು ಎನಿಸಿದರೂ, ಕೇವಿಯರ್ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಡೇಟೋನಾ ಮೊಬೈಲ್‌ಗೆ ಹೋಲಿಸಿದರೆ ಈ ಬೆಲೆ ತೀರಾ ಕಡಿಮೆ ಎನಿಸುತ್ತದೆ. ಏಕೆಂದರೆ, ರಷ್ಯಾದ ಲಕ್ಷುರಿ ಬ್ರ್ಯಾಂಡ್ ಕೇವಿಯರ್‌ನ ಆ್ಯಪಲ್ ಐಫೋನ್ 14 ಪ್ರೋ ಮ್ಯಾಕ್ಸ್ ಡೇಟೋನಾದ ಬೆಲೆ ಸುಮಾರು 1.1 ಕೋಟಿ ರೂ…!
ರಷ್ಯಾದ ಕೇವಿಯರ್ ಇತ್ತೀಚೆಗೆ ಆ್ಯಪಲ್ 14ನ ಇತ್ತೀಚಿನ ಮಾಡೆಲ್‌ನ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದ್ದು, ಈ ಮೊಬೈಲ್ ಫೋನ್ ಸುವಾಸನೆಯ ವೈಶಿಷ್ಟ್ಯಗಳನ್ನು ಹಾಗೂ ರೋಲೆಕ್ಸ್ ವಾಚೊಂದನ್ನು ಒಳಗೊಂಡಿದೆ. ಕೇವಿಯರ್ ಬ್ರ್ಯಾಂಡ್‌ನ ಈ ಐಫೋನ್ 14 ಪ್ರೋ ಮೊಬೈಲ್‌ನ ಇತ್ತೀಚಿನ ಕಲೆಕ್ಷನ್ ಅನ್ನು ಗ್ರ್ಯಾಂಡ್ ಕಾಂಪ್ಲಿಕೇಷನ್ಸ್ ಎಂದು ಕರೆಯಲಾಗುತ್ತದೆ.