ಚಿಕ್ಕ ಬಜೆಟ್‌, ದೊಡ್ಡ ಆದಾಯ ‘ಕಾಂತಾರ’ ಚಿತ್ರವೇ ಉದಾಹರಣೆ ➤‌ ಪೀಯುಷ್‌ ಗೋಯೆಲ್‌

(ನ್ಯೂಸ್ ಕಡಬ) newskadaba.com ಬೆಂಗಳೂರು ನ.01: ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯುಷ್‌ ಗೋಯೆಲ್‌ ಕನ್ನಡದಲ್ಲಿಯೇ ನಮಸ್ಕಾರ ಹೇಳಿ ಭಾಷಣವನ್ನು ಆರಂಭ ಮಾಡಿದರು. ಕಾಂತಾರ ಚಿತ್ರದ ಬಗ್ಗೆ ಪೀಯುಷ್‌ ಗೋಯೆಲ್‌ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಹೂಡಿಕೆಯನ್ನ ಕಾಂತಾರ ಸಿನಿಮಾಗೆ ಹೋಲಿಕೆ ಮಾಡಿ ಪೀಯುಷ್‌ ಗೋಯೆಲ್‌ ಭಾಷಣ ಮಾಡಿದರು.

ನಾನು ಆ ಸಿನಿಮಾ ನೋಡಿದ್ದೇನೆ. ಬಹಳ ಚಿಕ್ಕ ಬಜೆಟ್ ಸಿನಿಮಾ ಇದು. ಇದರಲ್ಲಿ ಕರ್ನಾಟಕ ಸಂಸ್ಕೃತಿಯನ್ನ ಎಷ್ಟು ಚಂದವಾಗಿ ತೋರಿಸಿದ್ದಾರೆ. ನಾನು ಈ ಸಿನಿಮಾದ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದೆ. ಎರಡಂಕಿ ಬಜೆಟ್ ಇಂದು 300 ಕೋಟಿಗೂ ಹೆಚ್ಚು ಅದಾಯ ಗಳಿಸಿದೆ. ಹೂಡಿಕೆ ಸಹ ಸಣ್ಣಾದಾಗಿ ಮಾಡಿದ್ದರೂ, ದೊಡ್ಡ ಮಟ್ಟದಲ್ಲಿ ಆದಾಯ ಪಡೆಯುವಲ್ಲಿ ಶ್ರಮ ಮಾಡಬಹುದು ಎಂದು ಹೂಡಿಕೆ ಸಮಾವೇಶದಲ್ಲಿ ಪೀಯುಷ್‌ ಗೋಯೆಲ್‌ ಮಾತನಾಡಿದ್ದಾರೆ.

Scroll to Top