ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಪ್ 4 ಸಿಎನ್​ಜಿ ಕಾರುಗಳಿವು!

(ನ್ಯೂಸ್ ಕಡಬ) newskadaba.com ನ.01: ಟಾಟಾ ಮೋಟಾರ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಈಗಾಗಲೇ ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡಲಾಗಿದ್ದು, ಇದೀಗ ಕಂಪನಿಯು ಆಲ್ಟ್ರೊಜ್ ಹ್ಯಾಚ್ ಬ್ಯಾಕ್ ಮಾದರಿಯಲ್ಲೂ ಸಿಎನ್​ಜಿ ವರ್ಷನ್ ಬಿಡುಗಡೆ ಮಾಡುತ್ತಿದೆ. ಐ-ಸಿಎನ್​ಜಿ ತಂತ್ರಜ್ಞಾನವು ಟಾಟಾ ಸಿಎನ್ ಜಿ ಕಾರುಗಳ ಪ್ರಮುಖ ಆಕರ್ಷಣೆಯಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್ ಜೊತೆಗೆ ಗರಿಷ್ಠ ಮೈಲೇಜ್ ಹಿಂದಿರುಗಿಸಲಿದೆ. ಆಲ್ಟ್ರೊಜ್ ಹೊಸ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್​ಜಿ ಕಿಟ್ ಹೊಂದಿಲಿದ್ದು, ಇದು ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಬಲೆನೊ ಸಿಎನ್​ಜಿ ಮಾದರಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿದೆ.

ಸಿಎನ್​ಜಿ ಪಂಚ್ ಮಾದರಿಯಾಗಿ ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ. ಇದು ಕೂಡಾ ಆಲ್ಟ್ರೊಜ್ ಹೊಸ ಮಾದರಿಗಾಗಿ ನೀಡಲಾಗುತ್ತಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್​ಜಿ ಕಿಟ್ ಹೊಂದಿಲಿದೆ. ಪಂಚ್ ಸಿಎನ್ ಜಿ ಮಾದರಿಯು 73 ಬಿಎಚ್ ಪಿ ಮತ್ತು 95 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಕೆಜಿಗೆ 28ರಿಂದ 31 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

Also Read  ಭೂಮಿಯನ್ನೇ ನುಂಗಲಿದೆಯಾ ಈ ಕಪ್ಪು ಕುಳಿ..!

ಹತ್ತಕ್ಕೂ ಹೆಚ್ಚು ಕಾರು ಮಾದರಿಗಳಲ್ಲಿ ಈಗಾಗಲೇ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಕಂಪನಿಯು ಇದೀಗ ಬ್ರೆಝಾ ಮಾದರಿಯಲ್ಲೂ ಹೊಸ ವರ್ಶನ್ ಬಿಡುಗಡೆ ಮಾಡುತ್ತಿದೆ. ಬ್ರೆಝಾ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾದಲ್ಲಿರುವ 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಜೋಡಣೆ ಮಾಡಲಿದ್ದು, ಹೊಸ ಕಾರು ಸಾಮಾನ್ಯ ಪೆಟ್ರೋಲ್ ಕಾರಿಗಿಂತಲೂ ರೂ. 95 ಸಾವಿರದಷ್ಟು ದುಬಾರಿಯಾಗಿರಲಿದೆ.

ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗೆ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಗ್ಲಾಂಝಾ ಕಾರು ಮಾದರಿಗಾಗಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಲಿದೆ. ಹೊಸ ಗ್ಲಾಂಝಾ ಕಾರಿನಲ್ಲಿ ಬಲೆನೊ ಕಾರಿನಲ್ಲಿರುವಂತೆ 1.2 ಲೀಟರ್ ನ್ಯಾಚುರಲಿ ಆಸ್ಪೆರೆಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಅಳವಡಿಸಿದ್ದು, ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ಇದು 76 ಬಿಎಚ್ ಪಿ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಪ್ರತಿ ಕೆ.ಜಿ ಸಿಎನ್ ಜಿಗೆ ಗರಿಷ್ಠ 30 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

error: Content is protected !!
Scroll to Top