Shocking | ಹತ್ತು ದಿನದ ಮಗುವನ್ನು ಬಾವಿಗೆ ಎಸೆದು ಕೊಂದ ಹೆತ್ತ ತಾಯಿ

(ನ್ಯೂಸ್ ಕಡಬ) newskadaba.com ಕಡಬ, ಅ.30. ಹತ್ತು ದಿನದ ಗಂಡು ಮಗುವನ್ನು ಹೆತ್ತ ತಾಯಿಯೇ ಬಾವಿಗೆ ಎಸೆದು ಕೊಲೆಗೈದ ಹೃದಯ ವಿದ್ರಾವಕ ಘಟನೆ ಕಡಬ ಸಮೀಪದ ಪಂಜದಿಂದ ವರದಿಯಾಗಿದೆ.

ಪಂಜದ ಕೂತ್ಕುಂಜ ಎಂಬಲ್ಲಿನ ಬಸ್ತಿಕಾಡು ನಿವಾಸಿ ಪವಿತ್ರಾ ಎಂಬಾಕೆಯನ್ನು ವರ್ಷದ ಹಿಂದೆ ತುಮಕೂರು ನಿವಾಸಿಗೆ ಮದುವೆ ಮಾಡಿಕೊಡಲಾಗಿದ್ದು, ಹೆಣ್ಣು ಮಗುವಿಗಾಗಿ ಆಸೆ ಪಟ್ಟಿದ್ದ ಪವಿತ್ರಾ ಗಂಡು ಮಗು ಹುಟ್ಟಿದ ಕಾರಣಕ್ಕಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶನಿವಾರದಂದು ಮಗುವನ್ನು ಬಾವಿಗೆ ಹಾಕಿರುವುದಾಗಿ ತಿಳಿದುಬಂದಿದೆ. ವಿಷಯ ತಿಳಿದ ಕೂಡಲೇ ಮಗುವನ್ನು ಬಾವಿಯಿಂದ ಮೇಲೆತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹಾದಿ ಮಧ್ಯೆ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ.

Also Read  ಅಂಗನವಾಡಿ ಕೇಂದ್ರದಲ್ಲಿ ಭರ್ಜರಿ ಉದ್ಯೋಗಾವಕಾಶ - ಆಸಕ್ತರಿಂದ ಅರ್ಜಿ ಆಹ್ವಾನ

 

 

error: Content is protected !!