ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ !

(ನ್ಯೂಸ್ ಕಡಬ) newskadaba.com ಅ.28: ಮೈಕ್ರೋ ಬ್ಲಾಗಿಂಗ್ ಕಂಪನಿ ಟ್ವಿಟರ್​ ಅನ್ನು ಉದ್ಯಮಿ ಎಲಾನ್ ಮಸ್ಕ್ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ, ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ. ಆದರೆ, ಉನ್ನತ ಹುದ್ದೆಯಲ್ಲಿರುವ ಪರಾಗ್ ಅಗರ್​ವಾಲ್ ಅವರನ್ನು ಹಾಗೆಯೇ ಕಳುಹಿಸಿಕೊಡುವಂತಿಲ್ಲ. ಒಪ್ಪಂದದ ಪ್ರಕಾರ ನೀಡಬೇಕಿರುವ ಪರಿಹಾರದ ಮೊತ್ತವನ್ನು ನಿಡಬೇಕಿದೆ ಎಂದು ವರದಿಯೊಂದರಲ್ಲಿ ಉಲ್ಲೇಖವಾಗಿದೆ. ಇದರ ಪ್ರಕಾರ ಅಂದಾಜು 42 ದಶಲಕ್ಷ ಡಾಲರ್, ಅಂದರೆ ಸುಮಾರು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್​ವಾಲ್ ಪಡೆಯಲಿದ್ದಾರೆ. ಇದರಲ್ಲಿ ವರ್ಷದ ಮೂಲ ವೇತನ, ಎಲ್ಲ ಈಕ್ವಿಟಿ ಅವಾರ್ಡ್​ಗಳು ಸೇರಿರಲಿವೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

Also Read  ದ.ಕ ಜಿಪಂ ಸಿಇಒ ಡಾ.ಕುಮಾರ್ ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ

ಟ್ವಿಟರ್​ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಅಗರ್​ವಾಲ್​ ಅವರಿಗೆ 2021ರ ಪರಿಹಾರವಾಗಿ 30.4 ದಶಲಕ್ಷ ಡಾಲರ್ (ಅಂದಾಜು 250 ಕೋಟಿ ರೂ.) ನೀಡಬೇಕಿದೆ. ಸಿಇಒ ಆಗಿ ಅಗರ್​ವಾಲ್ ವೇತನ ವಾರ್ಷಿಕ 1 ದಶಲಕ್ಷ ಡಾಲರ್ (ಸುಮಾರು 8.24 ಕೋಟಿ ರೂ.) ಇದೆ ಎಂದು ವರದಿ ಉಲ್ಲೇಖಿಸಿದೆ.

error: Content is protected !!
Scroll to Top