ಉಪ್ಪಿನಂಗಡಿ: ಮದ್ಯದ ಅಮಲಿನಲ್ಲಿ ಬಸ್ ಗೆ ಕಲ್ಲೆಸೆದ ಕಾರ್ಮಿಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 25. ಕೆಎಸ್‌ಆರ್‌ಟಿಸಿ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನ ಗಾಜಿಗೆ ಕಲ್ಲೆಸೆದು ಪುಡಿಗಟ್ಟಿದ ಘಟನೆ ಸೋಮವಾರದಂದು ಸಂಜೆ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಮದ್ಯದ ಅಮಲಿನಲ್ಲಿದ್ದು ಬಸ್ ನಿಲ್ಲಿಸಲು ಸೂಚಿಸಿದ್ದಾನೆ. ಆದರೆ, ಬಸ್ ನಿಲ್ಲಿಸದೇ ಮುಂದೆ ಸಾಗಿದ್ದು, ತದನಂತರ ಬಸ್‌ನಿಂದ ಕೆಳಗಿಳಿದ ಕೂಡಲೇ ಬಸ್‌ನ ಗಾಜುಗೆ ಕಲ್ಲು ಎಸೆದು ಹಾನಿ ಮಾಡಿದ್ದಾನೆ ಎನ್ನಲಾಗಿದೆ.

Also Read  ಬೆಂಗಳೂರಿನಿಂದ ಶಬರಿಮಲೆಗೆ ಐರಾವತ, ವೋಲ್ವೋ ಬಸ್ ಸೇವೆ ಶುರು

error: Content is protected !!
Scroll to Top