120W ಫಾಸ್ಟ್ ಚಾರ್ಜರ್​ನ ಹೊಸ iQOO Neo 7 ಸ್ಮಾರ್ಟ್​ಫೋನ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಅ.23: ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್​ನೊಂದಿಗೆ ಮತ್ತೆ ಬಂದಿದೆ. ಈ ವರ್ಷದ ಆರಂಭದಲ್ಲಿ ಐಕ್ಯೂ ನಿಯೋ 6 (iQOO Neo 6) ಎಂಬ ಫೋನನ್ನು ಬಿಡುಗಡೆ ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಐಕ್ಯೂ ನಿಯೋ 7 (iQOO Neo 7) ಸ್ಮಾರ್ಟ್​ಫೋನ್ ರಿಲೀಸ್ ಮಾಡಿದೆ. ಇದುಕೂಡ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಅತ್ಯಂತ ವೇಗದ ಚಾರ್ಜರ್​​ನಿಂದ ಕೂಡಿದೆ. ಸದ್ಯಕ್ಕೆ ವಿದೇಶದಲ್ಲಿ ಅನಾವರಣಗೊಂಡಿರುವ ಈ ಫೋನ್ ಮುಂದಿನ ತಿಂಗಳು ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ.

ಐಕ್ಯೂ ನಿಯೋ 7 ಸ್ಮಾರ್ಟ್​ಫೋನ್ ಒಟ್ಟು ನಾಲ್ಕು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB of RAM ಹಾಗೂ 128GB ಆಂತರಿಕ ಸಂಗ್ರಹಣೆಯ ವೇರಿಯಂಟ್‌ಗೆ ಚೀನಾದಲ್ಲಿ CNY 2699 ಇದೆ, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 30,900ರೂ. ಎನ್ನಬಹುದು. 8GB + 256GB ವೇರಿಯಂಟ್‌ಗೆ CNY 2999 (ಭಾರತದಲ್ಲಿ ಸುಮಾರು 34,300ರೂ.), 12GB + 256GB ವೇರಿಯಂಟ್‌ಗೆ CNY 3299 (ಭಾರತದಲ್ಲಿ ಸುಮಾರು 37,700ರೂ.), 12GB +512GB ಸ್ಟೋರೇಜ್ ವೇರಿಯಂಟ್‌ಗೆ CNY 3599 (ಭಾರತದಲ್ಲಿ ಸುಮಾರು 41,200ರೂ.) ನಿಗದಿ ಮಾಡಲಾಗಿದೆ.

Also Read  ಈ 8 ರಾಶಿಯವರಿಗೆ ಶುಭಫಲ, ಕಂಕಣಭಾಗ್ಯ ದಾಂಪತ್ಯದ ಸಮಸ್ಯೆ ವ್ಯಾಪಾರಾಭಿವೃದ್ಧಿ ಕಷ್ಟಗಳು ಪರಿಹರವಾಗುತ್ತದೆ

ಈ ಸ್ಮಾರ್ಟ್‌ಫೋನ್ 1080*2400 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಪ್ರಮುಖ SoC 6nm ಪ್ರಕ್ರಿಯೆಯನ್ನು ಆಧರಿಸಿದ್ದು, 3.05GHz ನ ಗರಿಷ್ಠ ವೇಗವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್​ನಲ್ಲಿ ರನ್‌ ಆಗಲಿದೆ. ಐಕ್ಯೂ ನಿಯೋ 7 ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ.

Also Read  ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಲು ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಗೊತ್ತೇ ?

error: Content is protected !!
Scroll to Top