ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!

(ನ್ಯೂಸ್ ಕಡಬ) newskadaba.com ಅ.23: ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಮೂರನೇ ಇವಿ ಸ್ಕೂಟರ್ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು, ಹೊಸ ಎಸ್1 ಏರ್ ಇವಿ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 79,999 ಬೆಲೆ ಹೊಂದಿದೆ. ಎಸ್1 ಪ್ರೊ ಮತ್ತು ಎಸ್1 ಬಿಡುಗಡೆಯ ನಂತರ ಕಂಪನಿಯು ಇದೀಗ ಎಸ್1 ಏರ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಸಾಂಪ್ರದಾಯಿಕ ಪೆಟ್ರೋಲ್ ಸ್ಕೂಟರ್ ಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ಹೊಸ ಷರತ್ತು ವಿಧಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಈ ತಿಂಗಳು 24ರ ಒಳಗಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ರೂ. 79,999 ದರ ವಿಧಿಸಲಿದ್ದು, 25ರ ನಂತರ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ರೂ. 84,999 ಬೆಲೆ ವಿಧಿಸುವುದಾಗಿ ಘೋಷಣೆ ಮಾಡಿದೆ.

Also Read  ವಾಚ್ಒಎಸ್ 9.1 ಬಿಡುಗಡೆ ಮಾಡಿದ ಆಪಲ್

ಹೊಸ ಎಸ್1 ಏರ್ ಇವಿ ಸ್ಕೂಟರ್ ನಲ್ಲಿ ಕಂಪನಿಯು 2.5kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಹೊಸ ಸ್ಕೂಟರ್ ಪ್ರತಿ ಚಾರ್ಜ್ ಗೆ ಗರಿಷ್ಠ 101 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. 2.5kWh ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಕಂಪನಿಯು 500 ವೊಲ್ಟೊ ಪೋರ್ಟಬಲ್ ಚಾರ್ಜರ್ ನೀಡಿದ್ದು, ಇದು ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ.

error: Content is protected !!
Scroll to Top