ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಟೂರ್ನಮೆಂಟ್ ► ಕಡಬದ ಸೈಂಟ್ ಆ್ಯನ್ಸ್ ಶಾಲೆಗೆ ಹಲವು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ, ನ.18. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಟೂರ್ನಮೆಂಟ್ ಚಾಂಪಿಯನ್ – 2017 ಸ್ಪರ್ಧೆಯಲ್ಲಿ ಭಾಗವಹಿಸಿದ ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಬಹುಮಾನ ವಿಜೇತ ವಿದ್ಯಾರ್ಥಿಗಳಾದ ವಸುಧಾ, ಸಾನ್ವಿ, ಸುಮುಖ್, ಪ್ರೇಕ್ಷಕ್, ಪ್ರೀತಮ್, ಪ್ರಕ್ಷಿತ್, ಸಾಯಿ ಪ್ರಣವ್, ಸಾತ್ವಿಕ್, ಸಾಕೇತ್, ಸಿದ್ದಾರ್ಥ್ ಆರ್., ಆವರ್ಿನ್, ಮಹಮ್ಮದ್ ಶಿಫಾನ್, ಸುಶ್ಮಿತಾ, ಶಮಿತಾ ಕೆ. ಹಾಗೂ ಸರ್ವೇಶ್ ಎಂ.ಕೆ. ಅವರನ್ನು ಶಾಲಾ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಶಾಲಾ ಸಂಚಾಲಕ ವಂ| ರೋನಾಲ್ಡ್ ಲೋಬೋ, ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಸುದರ್ಶನ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ದಕ್ಷಾ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸ್ಪರ್ಧೆಗೆ ಅಣಿಗೊಳಿಸಿದ್ದ ಕರಾಟೆ ಶಿಕ್ಷಕ ಯಾದವ ಬೀರಂತಡ್ಕ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Also Read  ಪಡುಬಿದ್ರಿ: ಪೋಕ್ಸೋ ಪ್ರಕರಣ; ಕರಾಟೆ ಶಿಕ್ಷಕನಿಗೆ 22 ವರ್ಷ ಜೈಲು ಶಿಕ್ಷೆ

error: Content is protected !!
Scroll to Top