ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ಟ್ರಾನ್ಫರ್ ಮಾಡುವುದು ಹೇಗೆ?

(ನ್ಯೂಸ್ ಕಡಬ) newskadaba.com ಅ.23: ಈ ಹಿಂದೆ ಆಂಡ್ರಾಯ್ಡ್​ ಮೊಬೈಲ್​ನಲ್ಲಿದ್ದ ಫೋಟೋ, ವಿಡಿಯೋ, ಕಾಂಟೆಕ್ಟ್, ವಾಟ್ಸ್​ಆ್ಯಪ್ ಚಾಟ್ ಅನ್ನು ಐಫೋನ್​ಗೆ ಕಳುಹಿಸುವುದು ಅಸಾಧ್ಯವಾಗಿತ್ತು. ಬಳಿಕ ಒಂದು ಆಯ್ಕೆ ನೀಡಿದರೂ ಅದುಕೂಡ ಸುಲಭದ್ದಾಗಿರಲಿಲ್ಲ. ಆದರೀಗ ಇವೆಲ್ಲವೂ ಅತ್ಯಂತ ಸುಲಭ.

ಇದಕ್ಕಾಗಿ ಮೊದಲು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ Move to iOS ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ನಿಮ್ಮ ಐಫೋನ್​ನಲ್ಲಿ ಒಂದು ಕೋಡ್ ಡಿಸ್ ಪ್ಲೇ ಆಗುತ್ತದೆ. ಆಂಡ್ರಾಯ್ಡ್ ಫೋನಲ್ಲಿ ಕೋಡ್ ಕೇಳಿದಾಗ ಅದನ್ನು ಹಾಕಬೇಕು. ಈಗ ವಾಟ್ಸ್​ಆ್ಯಪ್​ನಲ್ಲಿ ಕಾಣಿಸುವ ಟ್ರಾನ್ಫರ್ ಡೇಟಾ ಆಯ್ಕೆಯನ್ನು ಒತ್ತಿರಿ.
ನಂತರ ನಿಮ್ಮ ಆಂಡ್ರಾಯ್ಡ್​ ಫೋನನ್ನಲ್ಲಿ START ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡೇಟಾ ವರ್ಗಾವಣೆಗೆ ತಯಾರಾಗಲು ವಾಟ್ಸ್​ಆ್ಯಪ್ ಕೆಲ ಸಮಯ ತೆಗೆದುಕೊಳ್ಳುತ್ತದೆ. ಡೇಟಾ ಟ್ರಾನ್ಫರ್ ಆಗಲು ತಯಾರಾಗಿದೆ ಎಂಬೊತ್ತಿಗೆ ನಿಮ್ಮ ಆಂಡ್ರಾಯ್ಡ್​ ಫೋನ್​ನಿಂದ ವಾಟ್ಸ್​ಆ್ಯಪ್ ಸೈನ್​ಔಟ್ ಆಗುತ್ತದೆ. ನಂತರ ಅಲ್ಲೆ ಕಾಣಿಸುವ NEXT & CONTINUE ಬಟನ್ ಆಯ್ಕೆ ಮಾಡಿ.

Also Read  Vivo X200 Series- 200MP ಕ್ಯಾಮೆರಾದೊಂದಿಗೆ ಬಿಡುಗಡೆ- ಬೆಲೆ ಮತ್ತು ಫೀಚರ್ ಹೀಗಿವೆ


ನಂತರ ನಿಮ್ಮ ಐಫೋನ್​ನಲ್ಲಿ ಆ್ಯಪ್ ಸ್ಟೋರ್​ಗೆ ತೆರಳಿ ವಾಟ್ಸ್ಆ್ಯಪ್ ಹೊಸ ವರ್ಷನ್ ಅನ್ನು ಡೌನ್​ಲೋಡ್ ಮಾಡಬೇಕು. ಇನ್​ಸ್ಟಾಲ್ ಮಾಡಿದ ಬಳಿಕ ವಾಟ್ಸ್​ಆ್ಯಪ್ ಓಪನ್ ಮಾಡಿ ಆಂಡ್ರಾಯ್ಡ್ ಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ. ನಂತರ ಸ್ಟಾರ್ಟ್​ ಬಟನ್ ಒತ್ತಿ ಮುಂದಿನ ಸವಾಲವನ್ನು ಓದಿ ಮುಂದುವರೆಯಿರಿ. ಎಲ್ಲ ಅಧಿಸೂಷನೆಗಳು ಮುಗಿದ ನಂತರ ವಾಟ್ಸ್​ಆ್ಯಪ್ ಪೂರ್ಣವಾಗಿ ತೆರೆದು ನಿಮ್ಮ ಹಳೆಯ ಚಾಟ್​ಗಳು ಕಾಣಿಸಲು ಪ್ರಾರಂಭವಾಗುತ್ತದೆ.

error: Content is protected !!
Scroll to Top