ಕಡಬ: ನಿವೃತ್ತ ಶಿಕ್ಷಕ ಸ್ಕರಿಯ ಕೆ. ನಿಧನ

(ನ್ಯೂಸ್ ಕಡಬ) newskadaba.com ಕಡಬ, ಅ.18. ನಿವೃತ್ತ ಶಿಕ್ಷಕ, ಕಡಬ ಸಮೀಪದ ಕಳಾರ ನಿವಾಸಿ ಸ್ಕರಿಯ (72) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರದಂದು ಸ್ವಗೃಹದಲ್ಲಿ ನಿಧನರಾದರು.

ಸುಮಾರು 25 ವರ್ಷಗಳ ಕಾಲ ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯಲ್ಲಿ ಹಾಗೂ ಎಂಟು ವರ್ಷಗಳ ಕಾಲ ಕೊಕ್ಕಡದ ಸೈಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿದ್ದ ಮೃತರು, ನಿವೃತ್ತ ಮುಖ್ಯ ಶಿಕ್ಷಕಿ ಫಿಲೋಮಿನಾ ಸ್ಕರಿಯ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.

error: Content is protected !!
Scroll to Top