ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಬಲಿ ► ಸೂಕ್ತ ಚಿಕಿತ್ಸೆ ಸಿಗದೆ ವಿಟ್ಲ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ನ.17. ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯದ ವಿವಿಧೆಡೆ ಹಲವು ಜೀವಗಳು ಬಲಿಯಾಗಿರುವಂತೆಯೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಂದು ಎರಡು ಜೀವಗಳು ಬಲಿಯಾಗಿವೆ‌.

ಶುಕ್ರವಾರದಂದು ಸೂಕ್ತ ಚಿಕಿತ್ಸೆ ದೊರೆಯದೆ ಪುತ್ತೂರಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಮೃತಪಟ್ಟ ಘಟನೆಯ ಮರುಕ್ಷಣವೇ ವಿಟ್ಲದಲ್ಲಿ ವ್ಯಕ್ತಿಯೋರ್ವರು ಶುಕ್ರವಾರದಂದು ಸಂಜೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ವಿಟ್ಲ ಕಸಬಾ ಗ್ರಾಮದ ರಾಯರಬೆಟ್ಟು ನಿವಾಸಿ ರುಕ್ಮ ಪೂಜಾರಿ ಎಂಬವರ ಪುತ್ರ ರಜತ್ (27) ಎಂದು ಗುರುತಿಸಲಾಗಿದೆ.

Also Read  ಜಿಲ್ಲೆಯಲ್ಲಿ ಶಾಂತಿ ಕದಡಲು ದುಷ್ಕರ್ಮಿಗಳ ಯತ್ನ: ಕಿಡಿಗೇಡಿಗಳ ಬಂಧನಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಕೊಂಡೊಯ್ಯಲಾಗಿದ್ದರೂ ಆಸ್ಪತ್ರೆಯಲ್ಲಿ ವೈದ್ಯರು ಸಿಗದ ಕಾರಣ ಶುಕ್ರವಾರದಂದು ಸಂಜೆ ಮೃತಪಟ್ಟರೆನ್ನಲಾಗಿದೆ.

error: Content is protected !!
Scroll to Top