ಪುತ್ತೂರು: ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ ➤‌ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 13. ಗಾಂಜಾ ನಶೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪುತ್ತೂರು ನಗರ ಪೊಲೀಸ್ ಠಾಣಾ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತನನ್ನು ಕಬಕ ಗ್ರಾಮದ ಕಲ್ಲಂದಡ್ಕ ನಿವಾಸಿ ಉಮ್ಮರ್ ಫಾರೂಖ್ (36) ಎಂದು ಗುರುತಿಸಲಾಗಿದೆ. ಎಸ್.ಐ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಬಕ ಗ್ರಾಮದ ಪೋಳ್ಯ ಸಾರ್ವಜನಿಕ ಬಸ್ ತಂಗುದಾಣದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತಾ ಸಾರ್ವಜನಿಕರನ್ನುದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ನೀಡುತ್ತಿರುವುದಾಗಿ ಬಂದ ಮಾಹಿತಿ ಪ್ರಕಾರ ಅಲ್ಲಿಗೆ ತೆರಳಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಮಾದಕ ವಸ್ತು ಸೇವಿಸಿದ ಕುರಿತು ಸಂಶಯದ ಮೇರೆಗೆ ಆತನನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರ ಮುಂದೆ ಹಾಜರುಪಡಿಸಿದಾಗ ಆತ ಗಾಂಜಾ ಸೇವಿಸಿರುವ ಕುರಿತು ವೈದ್ಯಾಧಿಕಾರಿಗಳು ದೃಢಪತ್ರ ನೀಡಿದ್ದರು. ಹಾಗಾಗಿ ಆರೋಪಿ ಉಮ್ಮರ್ ಫಾರೂಖ್ ಅವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Also Read  ವಿಟ್ಲ: ಆಟವಾಡಲೆಂದು ಬಾವಿಗೆ ಇಳಿದ ವಿದ್ಯಾರ್ಥಿಗಳು ► ನೀರಿನಲ್ಲಿ ಮುಳುಗಿ‌ ಓರ್ವ ಮೃತ್ಯು

error: Content is protected !!
Scroll to Top