ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಹೊತ್ತಿ ಉರಿದ ಮನೆ ➤‌ ಅಪಾರ ನಷ್ಟ

(ನ್ಯೂಸ್ ಕಡಬ) newskadaba.com ಉಡುಪಿ, ಅ. 13. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ನಷ್ಟ ಸಂಭವಿಸಿದ ಘಟನೆ ಪರ್ಕಳ ಈಶ್ವರನಗರದ ವಿವೇಕಾನಂದ ನಗರದಲ್ಲಿ ನಡೆದಿದೆ.

ಬೆಂಕಿ ಅವಘಡದಲ್ಲಿ ಮನೆ ಸುಟ್ಟು ಕರಕಲಾಗಿದ್ದು, ಗೃಹೋಪಯೋಗಿ ಉಪಕರಣಗಳಾದ ಟಿವಿ, ಫ್ರಿಜ್, ಸೋಫಾ, ಬೆಡ್ ಸೇರಿದಂತೆ 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಘಟನೆಯ ವೇಳೆ ಮನೆಯಲ್ಲಿ ಯಾರೂ ಇರದೇ ಇದ್ದುದರಿಂದ ವಿಷಯ ತಿಳಿದ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸ್ಥಳೀಯ ಸಿಎಂಸಿ ಸದಸ್ಯರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.

Also Read  ಕಡಬ: ಫೆ. 22ರಿಂದ ಫೆ. 24ರ ವರೆಗೆ ಪರಪ್ಪು ಧರ್ಮ ನೇಮೋತ್ಸವ

error: Content is protected !!
Scroll to Top