ಮಂಗಳೂರು: ಲ್ಯಾಪ್ ಟಾಪ್ ಮಾರಾಟದಲ್ಲಿ ವಂಚನೆ ➤‌ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 11. ಕಡಿಮೆ ದರದಲ್ಲಿ ಲ್ಯಾಪ್‌ಟಾಪ್‌ ನೀಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 5.73 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಗರದ ಉದ್ಯಮಿಯೋರ್ವರು ಕಂಪ್ಯೂಟರ್‌ ಹಾಗೂ ಲ್ಯಾಪ್‌ಟಾಪ್‌ ಮೊದಲಾದ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದು, ಅವರಿಗೆ ಜೈಪುರ ವೈಶಾಲಿ ನಗರದ ಮಿರಾಕಲ್‌ ಟೆಕ್ನಾಲಜೀಸ್‌ನ ಮನೋಜ್‌ ಚೌರಾಸಿಯಾ ಎಂಬಾತ ಕರೆ ಮಾಡಿ ಕಡಿಮೆ ದರದಲ್ಲಿ ಲ್ಯಾಪ್‌ಟಾಪ್‌ ನೀಡುವುದಾಗಿ ತಿಳಿಸಿದ್ದ. ಅದರಂತೆ ಆಗಸ್ಟ್‌ ತಿಂಗಳಿನಲ್ಲಿ ಆತನಿಂದ ಎರಡು ಲ್ಯಾಪ್‌ಟಾಪ್‌ ಗಳನ್ನು ಖರೀದಿಸಿದ್ದರು. ಇದರ ಬಳಿಕ ಮನೋಜ್‌ ಚೌರಾಸಿಯಾ ಹಾಗೂ ಆತನ ಸಹಾಯಕಿ ಸುರಕ್ಷಾ ಖಾಂಡೆಲ್ವಾಲ್‌ ಕರೆ ಮಾಡಿ ಕಡಿಮೆ ದರದಲ್ಲಿ ಇನ್ನಷ್ಟು ಲ್ಯಾಪ್‌ಟಾಪ್‌ ಖರೀದಿಸುವಂತೆ ಆಫ‌ರ್‌ ನೀಡಿದ್ದರು. ಅದರಂತೆ ನಗರದ ಉದ್ಯಮಿ 15 ಎಚ್‌ಪಿ ಲ್ಯಾಪ್‌ಟಾಪ್‌ ಮತ್ತು ಬ್ಯಾಗ್‌ಗಳನ್ನು ನೀಡುವಂತೆ ತಿಳಿಸಿದ್ದರು. ಅದಕ್ಕಾಗಿ 5, 73, 750 ರೂ.ಗಳನ್ನು ಪಾವತಿಸಿದ್ದರು. ಆದರೆ ಆ ಬಳಿಕ ಲ್ಯಾಪ್‌ಟಾಪ್‌ ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Also Read  ಮಾಣಿ; ವಾಹನಗಳ ನಡುವೆ ಸರಣಿ ಅಪಘಾತ ➤ ಮೂವರಿಗೆ ಗಾಯ

error: Content is protected !!
Scroll to Top