ನೆಟ್ಟಣ: ರೈಲು ಹಳಿ ದಾಟುತ್ತಿದ್ದ ವೇಳೆ ಎಂಜಿನ್ ಢಿಕ್ಕಿ ➤‌ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ನೆಟ್ಟಣ, ಅ. 10. ಇಲ್ಲಿನ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಬಳಿ ರೈಲು ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನೆಟ್ಟಣದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡವರನ್ನು ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಎಂದು ಗುರುತಿಸಲಾಗಿದೆ. ರೈಲು ಇಂಜಿನ್ ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ತನ್ನ ಮಗಳು ಭಾಗವಹಿಸಿದ್ದ ಕ್ರೀಡಾಕೂಟಕ್ಕೆ ತೆರಳಿ ನೆಟ್ಟಣ ರೈಲು ನಿಲ್ದಾಣದಲ್ಲಿ ತಮ್ಮ ಸತೀಶ ಓಟೆಕಜೆ ಎಂಬವರ ಜೊತೆ ಬಂದಿಳಿದಿದ್ದರು. ಬಳಿಕ ಮನೆಯತ್ತ ತೆರಳಲು ನಿಲ್ದಾಣದ ಸಮೀಪದಲ್ಲೇ ರೈಲು ಹಳಿ ದಾಟುತ್ತಿದ್ದಾಗ ಏಕಾಏಕಿ ರೈಲು ಇಂಜಿನ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

Also Read  ಪ್ರವಾದಿ ಮಹಮ್ಮದ್ (ಸ.ಅ) ರವರ ಬಗ್ಗೆ ಫೇಸ್‌ಬುಕ್‌ ನಲ್ಲಿ ಅವಹೇಳನ ➤ ಆರೋಪಿಯ ವಿರುದ್ಧ ಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ನಿಂದ ಕಡಬ ಠಾಣೆಗೆ ದೂರು

error: Content is protected !!
Scroll to Top