ಪುತ್ತೂರು: ಆರ್ಟಿಒ ಆವರಣದಲ್ಲಿ ಮಾತಿನ ಚಕಮಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 10. ಬನ್ನೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಹೊರ ಆವರಣದಲ್ಲಿ ಖಾಸಗಿ ಸಂಸ್ಥೆಯ ವ್ಯಕ್ತಿ ಮತ್ತು ಸಾರ್ವಜನಿಕರೊಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಅದು ಹಲ್ಲೆ ನಡೆಸುವ ಹಂತಕ್ಕೆ ಏರಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸಾರ್ವಜನಿಕರೊಬ್ಬರು ಬ್ಲಾಕ್ ಆಗಿರುವ ವಾಹನ ಚಲನಾ ಪರವಾನಿಗೆಯ ದಾಖಲೆ ಪತ್ರವನ್ನು ಖಾಸಗಿ ಸಂಸ್ಥೆಯೊಬ್ಬರ ಮೂಲಕ ಪ್ರಾದೇಶಿಕ ಸಾರಿಗೆ ಕಚೇರಿಗೆ ನೀಡುವಲ್ಲಿ ನಡೆದ ವ್ಯತ್ಯಾಸಕ್ಕೆ ಸಂಬಂಧಿಸಿ ಅವರಿಬ್ಬರೊಳಗೆ ಕಚೇರಿಯ ಹೊರ ಆವರಣದ ಗೇಟ್ ಬಳಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಇಬ್ಬರೂ ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Also Read  ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ► ನವರಾತ್ರಿ ವಿಶೇಷ ಪೂಜೆ

error: Content is protected !!
Scroll to Top