ಕೊಯಿಲ: ಎಸ್ಕೆಸ್ಸೆಸ್ಸೆಫ್ ವತಿಯಿಂದ ಎಂಡೋಸಲ್ಪಾನ್ ಕೇಂದ್ರಕ್ಕೆ ಹಣ್ಣು ಹಂಪಲು ವಿತರಣೆ

(ನ್ಯೂಸ್ ಕಡಬ) newskadaba.com ಕೊಯಿಲ, ಅ. 09. ಪ್ರವಾದಿ ಮುಹಮ್ಮದ್ ಪೈಗಂಬರ್ (ಸ)ರವರ ಜನ್ಮ ದಿನಾಚರಣೆಯ ಪ್ರಯುಕ್ತ ಎಂಡೋಸಲ್ಫಾನ್ ಕೇಂದ್ರದ ವಿದ್ಯಾರ್ಥಿಗಳಿಗೆ SKSSF ಆತೂರು ಶಾಖೆ ಇದರ ವತಿಯಿಂದ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ರವರ ನೇತೃತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.

ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ರವರು ಹಣ್ಣುಹಂಪಲು ವಿತರಿಸಿ ಶುಭಹಾರೈಸಿದರು. SKSSF ಆತೂರು ಶಾಖೆ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬಿ ಕೆ, ಮಹಮ್ಮದ್ ರಫೀಕ್, ಕೆ.ಎ. ಯಹ್ಯಾ, ಬಿ ಆರ್ ಅಬ್ದುಲ್ ಖಾದರ್, ನಝೀರ್ ಕೊಯಿಲ ಅಝೀಝ್ ಹಲ್ಯಾರ ಉಪಸ್ಥಿತರಿದ್ದರು. ಎಂಡೋಸಲ್ಪಾನ್ ಕೇಂದ್ರ ಸಮಿತಿಯ ವ್ಯವಸ್ಥಾಪಕರು ಹಾಗೂ ಶಿಕ್ಷಕರು ಸಹಕರಿಸಿದರು. ಶಾಖೆ ಕಾರ್ಯದರ್ಶಿ ಎನ್ ಸಿದ್ದೀಕ್ ಸ್ವಾಗತಿಸಿದರು. ಶಾಖೆ ವಿಖಾಯ ಕಾರ್ಯದರ್ಶಿ ನಾಸಿರ್ ಮರೋಡಿ ವಂದಿಸಿದರು.

Also Read  ಜೂ. 19 ರಿಂದ ಜುಲೈ 6 ರವರೆಗೆ ಕುಷ್ಠರೋಗ ಪತ್ತೆ ಅಭಿಯಾನ ➤ಡಾ. ಕಿಶೋರ್ ಕುಮಾರ್

error: Content is protected !!
Scroll to Top