ಕಡಬ: ಹುಡುಗಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಚಾಟಿಂಗ್ ➤‌ ಯುವಕನನ್ನು ಕಡಬಕ್ಕೆ ಕರೆಸಿ ಹಣಕ್ಕಾಗಿ ಡಿಮ್ಯಾಂಡ್ – ಸಿನಿಮೀಯ ಶೈಲಿಯಲ್ಲಿ ಓರ್ವನ ಬಂಧನ

ಕಡಬ, ಅ.05. ಮಂಗಳೂರು ಮೂಲದ ಯುವಕನೋರ್ವ ಕಡಬದ ಯುವಕರ ತಂಡದಿಂದ ಹನಿಟ್ರಾಪ್ ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪರಾರಿಯಾಗಲು ಯತ್ನಿಸಿದ ಆರೋಪಿಗಳಲ್ಲಿ ಓರ್ವನನ್ನು ಪೋಲಿಸರು ಸಿನಿಮೀಯ ರೀತಿಯಲ್ಲಿ ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ರಾತ್ರಿ ಕಡಬದಲ್ಲಿ ನಡೆದಿದೆ.

ಹುಡುಗಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದ ಕಡಬದ ಯುವಕರ ತಂಡವೊಂದು ಮಂಗಳೂರಿನ ಯುವಕನನ್ನು ಬುಟ್ಟಿಗೆ ಬೀಳಿಸಿ ಮಂಗಳವಾರ ತಡರಾತ್ರಿ ಕಡಬಕ್ಕೆ ಕರೆಸಿದ್ದಾರೆ ಎನ್ನಲಾಗಿದೆ. ಬಳಿಕ ಕೆರ್ಮಾಯಿ ಕೋರಿಯಾರ್ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿದ್ದಲ್ಲದೆ ಹಣ ನೀಡದಿದ್ದರೆ ಹುಡುಗಿಯ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹರಿಯಹ ಬಿಡುವುದಾಗಿ ಬೆದರಿಕೆ ಒಡ್ಡಿ ಹಣ ತರುವಂತೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಹಲ್ಲೆಗೊಳಗಾದ ಯುವಕ ತನ್ನ ಸ್ನೇಹಿತನ ಮೂಲಕ ಕಡಬ ಪೋಲಿಸರಿಗೆ ನೀಡಿದ ಮಾಹಿತಿಯಂತೆ ಕಾರ್ಯಪ್ರವೃತ್ತರಾದ ಪೋಲಿಸರು, ಸಂತ್ರಸ್ಥನ ಮೂಲಕವೇ ಹಣ ನೀಡುವ ಆಮಿಷವೊಡ್ಡಿ ಆರೋಪಿಗಳನ್ನು ಕಡಬಕ್ಕೆ ಕರೆಸಿದ್ದಾರೆ. ಕಡಬದಲ್ಲಿ ಆರೋಪಿಗಳನ್ನು ಸುತ್ತುವರಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೋಲಿಸರ ಇರುವಿಕೆಯ ಮಾಹಿತಿ ತಿಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಮರ್ಧಾಳದ ಯುವಕನೋರ್ವ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಘಟನೆಯ ಬಗ್ಗೆ ಪೋಲಿಸರಿಂದ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ.

Also Read  ಕ್ವಾರೆಂಟೈನ್ ನಲ್ಲಿದ್ದ ಯೋಧ ಹೃದಯಾಘಾತದಿಂದ ಸಾವು

 

error: Content is protected !!
Scroll to Top