ಮರ್ಧಾಳ: ಆಟೋ ಚಾಲಕ- ಮಾಲಕ ಸಂಘ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮರ್ಧಾಳ, ಸೆ. 29. ಇಲ್ಲಿನ ಆಟೋ ಚಾಲಕ- ಮಾಲಕರ ಶ್ರೇಯಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮರ್ದಾಳ ವ್ಯಾಪ್ತಿಯ ಆಟೋ ಚಾಲಕ – ಮಾಲಕರನ್ನೊಳಗೊಂಡ ಸೌಹಾರ್ದ ಸಂಗಮ ಸಂಘದ ಉದ್ಘಾಟನಾ ಕಾರ್ಯಕ್ರಮವು ಇಂದು ಬೆಳಿಗ್ಗೆ ಮರ್ಧಾಳದ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಕಡಬ ಠಾಣಾ ಎಸ್ಐ ಆಂಜನೇಯ ರೆಡ್ಡಿಯವರು ದೀಪ ಬೆಳಗಿಸುವ ಮೂಲಕ ಮೂಲಕ ನೆರವೇರಿಸಿದರು.

ಸೌಹಾರ್ದ ಸಂಗಮದ ಆಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ ಎ.ಪಿ ಚೆರಿಯನ್ ಇವರನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌಹಾರ್ದ ಸಂಗಮದ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಉಮೇಶ್ ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಪಿ.ಮೋಹನ್, ಎ.ಪಿ ಚೆರಿಯನ್, ಗೋವಿಂದ ನಾಯಕ್, ಎಂ.ಪಿ.ಯೂಸುಫ್, ಅಬೂಬಕ್ಕರ್ ಹಾಜಿ, ಫಾದರ್ ಮ್ಯಾಥ್ಯೂ ಜೋನ್, ಝಕರಿಯಾಸ್ ನಂದಿಯಾಟ್ಟ್, ಡಾ.ಕೃಷ್ಣರಾಜ್, ಶೇಕರ್ ಜಿ, ಹರೀಶ್, ಸುಜಾತಾ, ಶ್ಯಾಮಲ ಮೊದಲಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮರ್ಧಾಳ ವ್ಯಾಪ್ತಿಯ ನಾಲ್ಕು ಜನ ಮೆಸ್ಕಾಂ ಪವರ್ ಮ್ಯಾನ್ ಗಳಾದ ಯಲ್ಲಪ್ಪ, ಅರ್ಜುನ್, ರಹಿಮಾನ್, ಸಿದ್ದಯ್ಯ ಹಾಗೂ ಅಧ್ಯಾಪಕರಾಗಿದ್ದ ಗೋವಿಂದ ಮಾಸ್ಟರ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

Also Read  ಆಲಂಕಾರು ಸಿ.ಎ ಬ್ಯಾಂಕಿನ ದೀನ ದಯಾಳು ರೈತ ಸಭಾಭವನ ಉದ್ಘಾಟನೆ ➤ಸಹಕಾರಿ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ: ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ ಅಭಿಮತ

error: Content is protected !!
Scroll to Top