ಬೆಳ್ತಂಗಡಿ: ಅಪಘಾತ ತಪ್ಪಿಸಲು ಹೋಗಿ ಮನೆಗೆ ಢಿಕ್ಕಿ ಹೊಡೆದ ಲಾರಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 27. ಅಪಘಾತ ತಪ್ಪಿಸಲು ಹೋದ ಲಾರಿಯೊಂದು ರಸ್ತೆ ಬದಿಯ ಮನೆಗೆ ಢಿಕ್ಕಿ ಹೊಡೆದ ಘಟನೆ ನಿಡಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರದಂದು ನಡೆದಿದೆ.

ಅತಿವೇಗದಲ್ಲಿ ಬಂದ ಬಸ್ ಲಾರಿಯನ್ನು ಓವರ್ ಟೇಕ್ ಮಾಡಿದ್ದು, ಈ ಸಂದರ್ಭ ಅಪಘಾತ ತಪ್ಪಿಸಲು ಲಾರಿ ಚಾಲಕ ವಾಹನವನ್ನು ರಸ್ತೆ ಬದಿಗೆ ತಂದಿದ್ದಾನೆ. ಈ ವೇಳೆ ಲಾರಿಯಲ್ಲಿ ಮರದ ದಿಮ್ಮಿಗಳು ತುಂಬಿದ್ದರಿಂದ ನಿಯಂತ್ರಣ ಕಳೆದುಕೊಂಡ ಲಾರಿಯು ರಸ್ತೆ ಬದಿಯಲ್ಲಿದ್ದ ಹಳೆ ಮನೆಗೆ ನುಗ್ಗಿದ್ದು ,ಮನೆಯ ಮೇಲ್ಛಾವಣಿ ಕುಸಿದಿದೆ. ಈ ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಲಾರಿ ಜಖಂಗೊಂಡಿದ್ದು, ಬಸ್ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Also Read  ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರನಿಗೆ 11 ಕೆಜಿ ತೂಕದ ಚಿನ್ನದ ಮುಖವಾಡ

error: Content is protected !!
Scroll to Top