ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಢಿಕ್ಕಿ ➤‌ ಚಾಲಕ ಇಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

(ನ್ಯೂಸ್ ಕಡಬ) newskadaba.com ಭಟ್ಕಳ, ಸೆ. 24. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಮೃತಪಟ್ಟು, ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ತಡರಾತ್ರಿ ಮೂಡಭಟ್ಕಳ ಬೈಪಾಸ್ ರಾ.ಹೆ. 66ರಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಚಾಲಕ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ, ರಂಗಿನಕಟ್ಟೆ ನಿವಾಸಿ ಮುಹಮ್ಮದ್ ಉನೈಸ್ ಖತೀಬ್ (20) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಅದೇ ಕಾಲೇಜಿನ ಮುಹಮ್ಮದ್ ಫುರ್ಖಾನ್ ಗಂಗಾವಳಿ, ಮುಹಮ್ಮದ್ ಸುಹೈಲ್ ಗೋಲಿವಾಲೆ, ಸೈಯದ್ ಇಸ್ಮಾಯಿಲ್ ಲಂಕಾ ಮತ್ತು ಅಬ್ದುರ್ರಹ್ಮಾನ್ ಎಂದು ಗುರುತಿಸಲಾಗಿದೆ. ಈ ಐದು ವಿದ್ಯಾರ್ಥಿಗಳು ಗೆಳೆಯರಾಗಿದ್ದು, ಕಳೆದ ರಾತ್ರಿ ಪರೀಕ್ಷೆಯ ಸಿದ್ಧತೆ ಮುಗಿಸಿ ಟೀ ಕುಡಿಯಲೆಂದು ಕಾರಿನಲ್ಲಿ ಒಟ್ಟಿಗೆ ಹೊರಟಿದ್ದು, ಶಿರೂರು ಚೆಕ್ ಪೋಸ್ಟ್ ಬಳಿ ಟಿ ಸ್ಟಾಲ್‌ ವೊಂದರಲ್ಲಿ ಚಹಾ ಕುಡಿದು ಭಟ್ಕಳದತ್ತ ಹಿಂತಿರುಗುತ್ತಿದ್ದ ವೇಳೆ ಮೂಡಭಟ್ಕಳ ಬೈಪಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಢಿಕ್ಕಿಯಾಗಿ ಉರುಳಿಬಿದ್ದಿದೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಿಂಚಿದ ಕಡಬದ ಮೋಹನ್ ಕೆರೆಕೋಡಿ ➤ 800 ಮೀಟರ್ ಓಟದಲ್ಲಿ ಕಂಚು

error: Content is protected !!
Scroll to Top