ರಾಜ್ಯದಲ್ಲಿ “ಹುಕ್ಕಾ” ಬಗ್ಗೆ ಪ್ರತಿಧ್ವನಿ ಹೊರಡಿಸಬೇಕಿದೆ..! ✍? ಜ್ಯೋತಿ ಜಿ. ಮೈಸೂರು

ಮಾದಕ ವಸ್ತುಗಳ ಬಗೆಗೆ ನಿಮಗೆಲ್ಲ ತಿಳಿದಂತೆ ನನ್ನ ನೆನಪಗೆ ಬರುವುದು ಕನ್ನಡದ ಮೇರು ನಟ, ನಟ ಸಾರ್ವಭೌಮ ಡಾ.ರಾಜಕುಮಾರ್‌ ಅವರು ಅಂದು ನಟಿಸಿದ ಕನ್ನಡದ ಚಲನಚಿತ್ರ ಶಬ್ದವೇಧಿ. ಈ ಚಿತ್ರದಲ್ಲಿ ಮಾದಕ ಮಾಫಿಯ ಬಗ್ಗೆ ನಮ್ಮ ಆಚಾರ, ವಿಚಾರಕ್ಕೆ ವ್ಯಸನಿಗಳ ಕುರಿತಂತೆ ಪೂರ್ವಗ್ರಹಪೀಡಿತ ಎಂಬಂಥೆ ನಮ್ಮ ಸಮಾಜದಲ್ಲಿನ ಯುವ ಜನತೆಗೆ ಸಾರಿ ಸಾರಿ ಸಾರುವ ಸಂದೇಶ ನೆನಪಿಗೆ ಬರುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಜನತೆಯ ನಡೆ, ದಶದಿಕ್ಕಗಳ ಮಾರ್ಗ ಎತ್ತಣವೋ ಎತ್ತಣ ಸಂಬಂಧದಂತೇ ಗೋಚರಿಸುತ್ತಿದೆ.ಈ ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು ಹೆಚ್ಚಾನು ಹೆಚ್ಚು ಯುವ ಪೀಳಿಗೆಯೇ ಆಗಿದೆ.ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂಬುದು ವಾಸ್ಥವದ ಸಂಗತಿ. ಮನೆಯಲ್ಲಿನ ತಂದೆ, ತಾಯಂದರಿದರು ಎಷ್ಟೆ ಗಮನ ಹರಿಸಿದರೂ ಸಹ ಮಕ್ಕಳು ಮಾದಕ ವಸ್ತುಗಳಿಗೆ ಬೇಗನೆ ಆಕರ್ಷಣೆ ಒಳಗಾಗುತ್ತಿದ್ದಾರೆ ಎನ್ನುವುದು ಸ್ಪಷ್ಟ ಚಿತ್ರಣ. ಏಕೆಂದರೆ..? ಅವರೆಲ್ಲ ಹದಿಹರೆಯದವರು, ಯಾರ ಮಾತನ್ನು ಕೇಳುವ ತಾಳ್ಮೆ ಸಹನಾಶೀಲತೆ ಅವರಲ್ಲಿ ಮೈಗೂಡುವುದೇ ಇಲ್ಲವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಅವರನ್ನು ಹತೋಟಿಗೆ ತರುವುದು ಕೂಡ ಒಂದು ದೊಡ್ಡ ಮಟ್ಟದ ಸಾವಲಾಗಿ ಪರಿಣಮಿಸಿದೆ.ನಾನಾ ಮೂಲೆಯಲ್ಲಿನ ಹಲವಾರು ಕಾಲೇಜಿನ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ೧೮ ವರ್ಷದೊಳಗಿನವರೇ ಹೆಚ್ಚಾಗಿ ವ್ಯಸನಿಗಳಾದ್ದಾರೆ ಎಂಬುದು ಇತ್ತೀಚಿನ ಸಮೀಕ್ಷಾ ವರದಿಗಳ ಉಲ್ಲೇಖವಾಗಿವೆ.

ಮೊದಲು ಧೂಮಪಾನ ಮಾಡುತ್ತಿದ್ದವರು ಈಚಗೆ “ ಹುಕ್ಕಾ ಕಫೆ ʼʼಎಂಬ ಆಧುನಿಕ ಮಾದಕ ಮೋಜು, ಮಸ್ತಿಗೆ ಬೀಸಣಿಕಿಯಂತೇ ಬೀಸಿ ಧಾವಿಸುತ್ತಿರವುದು ಮೇಲ್ನೋಟಕ ವಾಸ್ತವದ ಸ್ಥಿತಿ.” ಹುಕ್ಕಾ ” ಕಡಿಮೆ ದರದಲ್ಲಿ ದೊರೆಯುವುದರಿಂದ ೨೦೦ ರೂಗಳಿಗೆ ಒಂದು ಘಂಟೆಗೆ ಎಷ್ಷೂ ಬೇಕಾದರೂ ಸೇದಬಹುದು ಎಂದು ನಾನು ಕೂಡ ಕೆಲವು ವಿದ್ಯಾರ್ಥಿಗಳನ್ನು ಮಾಹಿತಿ ಕೇಳಿದಾಗ ಅವರ ಅನುಭವದ ಮಾತುಗಳು ಅಚ್ಚರಿಯ ರೀತಿಯಲ್ಲಿ ಮೈ ಕೊಡವಿ ಬಂದವು. ಏನೂ ಅರಿಯದ ಈ ಮುದ್ದ ಮಕ್ಕಳಲ್ಲಿ ಈ ಹುಕ್ಕ ಮಾಡಿರುವ ಮೋಡಿ ಆಥಂಕ ಸೃಷ್ಟಿಸುವ ವಾತಾವರಣವೇ ಸರಿ ಎಂಬ ಲೆಕ್ಕಕ್ಕೆ ಹೋಗಿ ಬಿಡುತ್ತೇವೆ.

ಮೊದಲಿಗೆ ಹುಕ್ಕಾದ ಇತಿಹಾಸವನ್ನು ತಿಳಿಯುವಾಗ ಹುಕ್ಕಾ ಅಥವಾ ವಾಟರ್‌ಪೈಪ್ ಅನ್ನು ಅಕ್ಬರ್‌ನ ಪರ್ಷಿಯನ್ ವೈದ್ಯ ಅಬುಲ್-ಫತ್ ಗಿಲಾನಿ ಅವರು ಮೊಘಲ್ ಭಾರತದ ಸಮಯದಲ್ಲಿ “ಫತೇಪುರ್ ಸಿಕ್ರಿ” ಎಂಬ ಭಾರತೀಯ ನಗರದಲ್ಲಿ ಮೊದಲಿಗೆ ಕಂಡುಹಿಡಿಯಲಾಯಿತು ಎಂದು ಐತಿಹಾಸಿಕ ಉಲ್ಲೇಖ ಹೇಳುತ್ತದೆ. ನಂತರ ಹುಕ್ಕಾ ಭಾರತೀಯ ಉಪ ಖಂಡದಿಂದ ಪರ್ಷಿಯಾಕ್ಕೆ ಹರಡಿತು, ಇದನ್ನು ಪರ್ಷಿಯಾದ ಸಫಾವಿಡ್ರಾ ರಾಜವಂಶದಲ್ಲಿ ಹುಟ್ಟಿಕೊಂಡು ಅಲ್ಲಿಂದ ಅದು ಅಂತಿಮವಾಗಿ ಭಾರತೀಯ ಉಪಖಂಡಕ್ಕೆ ಹರಡಿತು ಎಂಬ ಇತಿಹಾಸದ ಪ್ರತೀತಿ.

Also Read  ಭುವನೇಶ್ವರಿ ಹೆಗಡೆ ಎಂಬ ನಗೆಬುಗ್ಗೆ

ಹುಕ್ಕಾ ಪರಿಕಲ್ಪನೆಯು ಮಧ್ಯಕಾಲಿನ ಕಾಲಘಟ್ಟದಲ್ಲಿ ಭಾರತದಲ್ಲಿಯೇ ಹುಟ್ಟಿಕೊಂಡಿದೆ ಎಂಬ ಇತಿಹಾಸದಿಂದ ಮೆಲುಕಾಖಬಹುದು. ಒಂದು ಕಾಲದಲ್ಲಿ ಇದು ಶ್ರೀಮಂತರ ಪ್ರಾಂತ್ಯವಾಗಿತ್ತು, ವಿಶೇಷವಾಗಿ ಮೊಘಲ್ ಆಳ್ವಿಕೆಯಲ್ಲಿ ಇದು ಅತ್ಯಂತ ಜನಪ್ರಿಯವಾಗಿತ್ತು ಎಂಬ ಹೆಗ್ಗಳಿಕೆಯೂ ಇದೆ, ಅದರ ಫಲವಾಗಿ ಇಂದು ಮತ್ತೊಮ್ಮೆ ಜನಸಾಮಾನ್ಯರ ಗಮನವನ್ನು ಹುಕ್ಕಾ ಕೆಫೆಗಳಾಗಿ ಮತ್ತು ರೆಸ್ಟೊರೆಂಟ್‌ಗಳಾಗಿ ಬಹಳಷ್ಟು ಜನಪ್ರಿಯವಾಗ ತೊಡಗಿವೆ. ಭಾರತದಲ್ಲಿ ಪುರಾತನ ಕಾಲದಿಂದಲೂ ಹುಕ್ಕಾಗಳ ಬಳಕೆ ಕೇವಲ ಒಂದು ಪದ್ಧತಿದೆಯಾದರೆ, ಪ್ರತಿಷ್ಠೆಯ ವಿಷಯವಾಗಿತ್ತು. ಹಾಗಾಗಿ ಶ್ರೀಮಂತ ಮತ್ತು ಮಧ್ಯಮ ವರ್ಗದವರು ಹುಕ್ಕಾಗಳ ಧೂಮಪಾನವನ್ನು ಮಾಡುವದಾದರೆ, ನಂತರ ಸಾಂಪ್ರದಾಯಿಕ ಹಳ್ಳಿಗಳಲ್ಲಿ ತಂಬಾಕನ್ನು ಹುಕ್ಕಾಗಳಲ್ಲಿ ಧೂಮಪಾನ ಮಾಡುತ್ತಿದ್ದರೂ ಕೂಡ ಅದರ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ತಂಬಾಕು-ಮೊಲಾಸಸ್ ಅನ್ನು ಧೂಮಪಾನ ಮಾಡುವುದು ಈಗ ಭಾರತದ ಯುವಜನರಲ್ಲಿ ಆಕರ್ಷಣೆಯ ತುಂಬನವಾಗಿದೆ. ಭಾರತದಲ್ಲಿ ಹಲವಾರು ಚೈನ್ ಕ್ಲಬ್‌ಗಳು, ಬಾರ್‌ಗಳು ಮತ್ತು ಕಾಫಿ ಶಾಪ್‌ಗಳು ತಂಬಾಕುಗಳು ತಲೆ ಎತ್ತಿವೆ.

ಭಾರತದಲ್ಲಿ ಹುಕ್ಕಾಗಳನ್ನು ವ್ಯಾಪಕವಾಗಿ ತಯಾರಿಸಿ ರಫ್ತು ಮಾಡುವ ಪಶ್ಚಿಮ ಕರಾವಳಿಯಲ್ಲಿರುವ ಸಣ್ಣ ಮೀನುಗಾರಿಕಾ ಪಟ್ಟಣವಾದ ‘ಕೊಯಿಲಾಂಡಿ’ಯು ಇವುಗಳನ್ನೇ ಮಲಬಾರ್ ಹುಕ್ಕಾ ಅಥವಾ ಕೊಯಿಲಾಂಡಿ ಹುಕ್ಕಾ ಎಂದು ಕರೆಯಲಾಗುತ್ತದೆ. ಇಂದು ವಿವಿಧ ರೀತಿಯ ಪ್ಲೇವರ್‌ ನಲ್ಲಿ ಸುಲಭವಾಗಿ ದೊರೆಯುತ್ತಿದ್ದು, ೨೦೦ ರೂ. ಗಳಿಂದ ಆರಂಭವಾಗಿ ಸಾವಿರಾರು ರೂಗಳಲ್ಲಿ ಲಭ್ಯವಿದೆ.

ಉದಾಹರಣೆ : ಫ್ಲೇವರ್ ಮತ್ತು ಕಲ್ಲಿದ್ದಲು ಹೊಂದಿರುವ ಇಮಾರ್ಕೆಟ್ ಹುಕ್ಕಾ 10 ಇಂಚುಗಳು ರೂ.599, ಹೈದರಾಬಾದಿ 12 ಇಂಚಿನ ಗ್ಲಾಸ್ ಹುಕ್ಕಾ ಇಮಾರ್ಕೆಟ್ ಮೂಲಕ ರೂ.409, ಇರಾ 12 ಇಂಚಿನ ಖಾರ್ಬೂಜಾ ಶೇಪ್ ಹುಕ್ಕಾ ರೂ.469, ಹೀಗೆ ಹತ್ತು ಹಲವು ರೀತಿಯ ಹುಕ್ಕಾಗಳು ಸುಲಭವಾಗಿ ಹಣಕ್ಕೆ ದೊರೆಯುತ್ತವೆ. ಇವುಗಳನ್ನು ಈಚಗೆ ತಮ್ಮ ತಮ್ಮ ಹುಟ್ಟು ಹಬ್ಬದ ದಿನ ಮಾನಗಳನ್ನು ಕಫೆಗಳಲ್ಲಿ ಆಚರಿಸುತ್ತಿದ್ದಾರೆ.

ಕೆಲವು ವಿದ್ಯಾರ್ಥಿಗಳು ತಮ್ಮ ಸುಂದರವಾದ ಆಗರದ ಆಢಂಬರದ ಕ್ಷಣಗಳನ್ನು ಇಂತಹ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವದು ದುರಂತವೇ ಸರಿ. ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧನೆಯ ಪ್ರಕಾರ, ಒಂದೇ ಒಂದು ಸಿಗರೇಟ್‌ಗೆ ಹೋಲಿಸಿದರೆ, “ಒಂದು ಸೆಷನ್” ಗಾಗಿ ಹುಕ್ಕಾವನ್ನು ಧೂಮಪಾನ ಮಾಡುವುದು 25 ಪಟ್ಟು ಟಾರ್, 125 ಪಟ್ಟು ಹೊಗೆ, 2.5 ಪಟ್ಟು ನಿಕೋಟಿನ್ ಮತ್ತು10 ಪಟ್ಟು ಕಾರ್ಬನ್ ಮಾನಾಕ್ಸೈಡ್ ಅನ್ನು ನೀಡುತ್ತದೆ. ಈಗ ನಿಮಗೆ ತಿಳಿಯುತ್ತದೆ ಎಷ್ಟು ಹಾನಿಕರ ಎಂದು..!

Also Read  ನಿಜವಾದ ಪ್ರೀತಿಯನ್ನು ಪಡೆಯುವುದು ಹೇಗೆ? ಶಕ್ತಿಶಾಲಿ ಮಂತ್ರ ತಂತ್ರ

ಹುಕ್ಕಾದಿಂದ ಆರೋಗ್ಯದ ಪರಿಣಾಮಗಳು: ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಮತ್ತು ಬ್ರಾಂಕೈಟಿಸ್‌ನಂತಹ ಶ್ವಾಸಕೋಶದ ಕ್ರಿಯೆಯ ತೊಡಕುಗಳು, ಹೃದ್ರೋಗ ಮತ್ತು ಹೃದಯಾಘಾತದಂತಹ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವುದು. ಕ್ಯಾನ್ಸರ್, ವಿಶೇಷವಾಗಿ ಶ್ವಾಸಕೋಶ, ಗಂಟಲು ಮತ್ತು ಬಾಯಿಯ ಕ್ಯಾನ್ಸರ್‌ನ ಹೆಚ್ಚಿನ ಅಪಾಯ ಕಂಡರಿಯಬಹುದು. ಅಲ್ಲದೆ ಇದರ ಹೊಗೆಯು ನಿಕೋಟಿನ್ ಅನ್ನು ಒಳಗೊಂಡಿರುವುದರಿಂದ ಶಿಶಾ ವ್ಯಸನಕಾರಿಯಾಗಿದೆ ಎಂದು ವ್ಯಾಖ್ಯಾನಿಸಬಹುದು. ಇದು ತುಂಬಾ ವ್ಯಸನಕಾರಿಗಳಿಗೆ ದಿವ್ಯ ಔಷಧವಾಗಿದೆ. ಇದರರ್ಥ ಶಿಶಾವನ್ನು ನಿಯಮಿತವಾಗಿ ಧೂಮಪಾನ ಮಾಡುವ ಜನರು ನಿಕೋಟಿನ್ ವ್ಯಸನವನ್ನು ಹೊಂದಿರುವುದಲ್ಲದೆ, ಮುಂದೆ ಹೋದೆಂತಲ್ಲಾ ನಿಲ್ಲಿಸಲು ಬಹು ಕಷ್ಟವಾಗಬಹುದು. ಅದು ಅಲ್ಲದೆ ಹುಕ್ಕಾ ಮೂಲಕ ಧೂಮಪಾನ ಮಾಡುವ ತಂಬಾಕು, ಗಾಂಜಾ, ಅಫೀಮು ಮತ್ತು ಇತರ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಪ್ರಮುಖ ಆರೋಗ್ಯ ಅಪಾಯಗಳು ವಿಷಕಾರಿ ರಾಸಾಯನಿಕಗಳು, ಕಾರ್ಸಿನೋಜೆನ್‌ಗಳು ಮತ್ತು ನೀರಿನಿಂದ ಫಿಲ್ಟರ್ ಮಾಡದ ಭಾರವಾದ ಲೋಹಗಳಿಗೆ ಒಡ್ಡಿಕೊಳ್ಳುವುದು, ಹುಕ್ಕಾಗಳನ್ನು ಹಂಚಿಕೊಂಡಾಗ ಸಾಂಕ್ರಾಮಿಕ ರೋಗಗಳು ಮತ್ತು ರೋಗಕಾರಕ ಬ್ಯಾಕ್ಟೀರಿಯಾಗಳ ಹರಡುವಿಕೆಗೆ ಸಂಬಂಧಿಸಿದೆ.., ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಜನಸಂಖ್ಯೆಯಲ್ಲಿ ಮತ್ತು ಯುನೈಟೆಡ್ ಸ್ಟೇಟ್ಸ್, ಯುರೋಪ್, ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಯುವಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದಲ್ಲದೆ ಭಾರತದಲ್ಲಿಯೂ ಬಳಸುತ್ತಿದ್ದಾರೆ.
ಹುಕ್ಕಾ ಸಂಪೂರ್ಣ ನಿಷೇಧ: ದೇಶದ ವಿವಿಧ ರಾಜ್ಯಗಳಾದ ಗುಜರಾತ್‌, ಮಹಾರಾಷ್ಟ್ರ, ಪಂಜಾಬ್‌ ಸೇರಿದಂತೆ ಇನ್ನೂ ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಷೇಧಿಸಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ ಇಂಬು ನೀಡಿದೆ.

ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಯುವಜನತೆಯು ಈ ಆಕರ್ಷಣೆಗೆ ಹೆಚ್ಚೆಚ್ಚು ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವದು ತೀರ್ವ ದುಃಖಕ್ಕೆ ಕಾರಣವಾಗಬಹುದ. ಈ ಹುಕ್ಕಾ ಬಗ್ಗೆಯೇ ಸದನದಲ್ಲಿ ಚರ್ಚೆ ಆಯಿತು. ಬೆಂಗಳೂರು ನಗರದಲ್ಲಿಯೇ ೭೮ ಹುಕ್ಕಾ ಬಾರ್‌ ಗಳಿದ್ದು, ಈಗಾಗಲೇ ೫೪ ಪ್ರಕರಣಗಳನ್ನು ದಾಖಲಿಸಲಾಗಿದೆ.ರಾಜ್ಯದ ಮೈಸೂರು ನಗರದಲ್ಲಿ ೧೬ ಹುಕ್ಕಾಬಾರ್‌ ಗಳಿದ್ದು ಕೇವಲ ಒಂದು ಪ್ರಕರಣ ಮಾತ್ರದಾಖಲಾಗಿದೆ ಎಂಬುದು ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ.

Also Read  ದೂರವಾಗಿರುವ ಸಂಗಾತಿ ಈ ತಂತ್ರದಿಂದ ನಿಮ್ಮ ಹತ್ತಿರ ಬರುವರು

ಇದರ ಜೊತೆಗೆ ಪೊಲೀಸರು ಸಾಕಷ್ಟು ಕಡೆಗಳಲ್ಲಿ ಇಂಥ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಸರ್ಕಾರವು ಮಾದಕ ವಸ್ತು ಸೇವನೆ ತಡೆಗಟ್ಟಲು, ನಿಯಂತ್ರಿಸಲು ಜನಜಾಗೃತಿಗಳನ್ನು ನಡೆಸಿದರೂ ಕೂಡ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಾಗ ಯುವನತೆಯು ಮಾದಕ ವ್ಯಸನಿಗಳಿಗೆ ಬಲಿಯಾಗದಂತೆ ತಡೆಯಬಹುದು ಎನ್ನುವುದು ಚಿಕ್ಕ ಮತ್ತು ಚೊಕ್ಖ ಸಲಹೆ..!  ದೇಶವು ರೂಪಿಸುವ ಯುವಜನತೆಯು ದೇಶದ ಒಳಿತಿಗಾಗಿ ಇಂತಹ ಮಾದಕ ವಸ್ತುಗಳ ವಿರುದ್ದ ಸಿಡಿದೆದ್ದು ನಿಲ್ಲಬೇಕು. ಸರ್ಕಾರವು ಕೂಡ ಈ ಕುರಿತಂತೆ ಹೆಚ್ಚಿನ ನಿಗಾ ವಹಿಸುವ ಅತ್ಯಗತ್ಯವಿದೆ. ಇದರ ವಿರುದ್ಧ ಪ್ರಜ್ಞಾವಂತ ನಾಗರಿಕರು ಕೂಡ ಪ್ರತಿಭಟಿಸಿ ಮತ್ತು ಪ್ರತಿಧ್ವನಿಸುವ ಜರೂರಿದೆ. ಭವಿತ್ಯದ ತಿರುವು ನಮ್ಮ ಕೈಯಲ್ಲಿಯೇ ಇದೆ. ಎಲ್ಲರ ಬದುಕು ಬಂಗಾರವಾಗಲಿ ಎಂಬುದೇ ನನ್ನ ಮನದ ಇಂಗಿತ.

error: Content is protected !!
Scroll to Top