ಪುತ್ತೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್ ಕದ್ದ ವೃದ್ಧೆ ➤‌ ಬಸ್ಸಿಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ, ವೃದ್ಧೆ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.22. ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೋರ್ವರ ಪರ್ಸ್‌ ಅನ್ನು ವೃದ್ಧೆಯೋರ್ವರು ಎಗರಿಸಿದ್ದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರು ತಾಲೂಕು ಪಂಚಾಯತ್ ಯೋಜನಾಧಿಕಾರಿಯವರು ಮಂಗಳವಾರದಂದು ಖಾಸಗಿ ಬಸ್ ನಲ್ಲಿ ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಬ್ಯಾಗ್ ನಲ್ಲಿದ್ದ ಪರ್ಸ್ ಅನ್ನು ಮಹಿಳೆಯೊಬ್ಬರು ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಯೋಜನಾಧಿಕಾರಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪರ್ಸ್ ಕದ್ದ ಮಹಿಳೆಯು ಬುಧವಾರದಂದು ಮಂಗಳೂರಿನಿಂದ ಉಪ್ಪಿನಂಗಡಿಗೆ ಹೊರಟಿದ್ದ ಬೇರೊಂದು ಖಾಸಗಿ ಬಸ್ ನಲ್ಲಿ ಕುಳಿತಿರುವುದನ್ನು ಕಂಡ ಬಸ್ಸಿನ ನಿರ್ವಾಹಕ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ಅರಿತ ವೃದ್ಧೆ ಮಹಿಳೆಯು ಪಡೀಲ್ ಬಳಿ ಬಸ್ಸಿನಿಂದ ಇಳಿಯಲು ಯತ್ನಿಸಿದ್ದು, ನಿರ್ವಾಹಕ ಮತ್ತು ಚಾಲಕ ತಡೆದಿದ್ದಾರೆ. ಸ್ಥಳಕ್ಕೆ ಬಂದ ಕಂಕನಾಡಿ ಗ್ರಾಮಾಂತರ ಪೊಲೀಸರು ವೃದ್ಧೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ.

Also Read  ಮಲೇರಿಯಾ ಮುಕ್ತದತ್ತ "ಕರಾವಳಿ' !!! ➤ ಸಾವಿರದಷ್ಟಿದ್ದ ಮಲೇರಿಯಾ ಈಗ ಬಹು ಪ್ರಮಾಣದಲ್ಲಿ ಇಳಿಕೆ

 

error: Content is protected !!
Scroll to Top