ಕನ್ನಡ ಮಾಣಿಕ್ಯ ಪ್ರಶಸ್ತಿಗೆ ಡಾ. ಹಾಜಿ ಎಸ್.ಅಬೂಬಕರ್ ಆರ್ಲಪದವು ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ಇಲ್ಲಿನ ಪ್ರತಿಷ್ಠಿತ ರಂಗಭೂಮಿ ಸಂಸ್ಥೆ ಗೆಜ್ಜೆ- ಹೆಜ್ಜೆ ರಂಗ ತಂಡದ ಆಶ್ರಯದಲ್ಲಿ , ಕನ್ನಡದ ಕೈಂಕರ್ಯವನ್ನು ಮಾಡುತ್ತಿರುವ ಸಾಧಕರಿಗೆ ನೀಡಲ್ಪಡುವ ಕನ್ನಡ ಮಾಣಿಕ್ಯ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈಯುತ್ತಿರುವ ಗಡಿನಾಡ ಸಂಘಟಕ ಡಾ.ಹಾಜಿ.ಎಸ್ ಅಬೂಬಕರ್ ಆರ್ಲಪದವು ಇವರನ್ನು ಆಯ್ಕೆ ಮಾಡಲಾಗಿದೆ.

ಇವರು ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಸಮಿತಿ ಸದಸ್ಯರಾಗಿ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ, ಸಿಎಸ್ ಸಿ, ವಿಎಲ್ಇ ಸೊಸೈಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರು ಸೀರತ್ ಕಮಿಟಿ ಕಾರ್ಯದರ್ಶಿಯಾಗಿ, ಶಿಕ್ಷಣ ಸಂಪನ್ಮೂಲ ಕೇಂದ್ರ ತಾಲೂಕು ಉಪಾಧ್ಯಕ್ಷರಾಗಿ, ಗಡಿನಾಡ ಧ್ವನಿ ಪತ್ರಿಕೆ ಸಂಪಾದಕರಾಗಿ, ಗಡಿನಾಡ ಸಮ್ಮೇಳನದ ರೂವಾರಿಯಾಗಿ ಅಲ್ಲದೇ ಹಲವಾರು ಸಂಘ ಸಂಸ್ಥೆಗಳ ಸಾರಥಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Also Read  ಬಂಡೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ- ಮೀನುಗಾರರ ರಕ್ಷಣೆ

error: Content is protected !!
Scroll to Top