ಸಾಲ ತೀರಿಸಿಲ್ಲವೆಂದು ಗರ್ಭಿಣಿ ಮಹಿಳೆಯ ಮೇಲೆಯೇ ಟ್ರ್ಯಾಕ್ಟರ್ ಹರಿಸಿದ ಫೈನಾನ್ಸ್ ಸಿಬ್ಬಂದಿ..

(ನ್ಯೂಸ್ ಕಡಬ) newskadaba.com ಜಾರ್ಖಂಡ್, ಸೆ. 18. ಸಾಲ ಪಾವತಿ ಮಾಡಿಲ್ಲವೆಂದು ಸಾಲ ವಸೂಲಾತಿಗೆ ಬಂದ ಸಿಬ್ಬಂದಿಗಳು ಮನೆಯಲ್ಲಿದ್ದ ಗರ್ಭಿಣಿ ಮಹಿಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದ ಘಟನೆ ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಇಚ್ಚಾಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೃಷಿ ಮಾಡಲೆಂದು ಖಾಸಗಿ ಫೈನಾನ್ಸ್ ವೊಂದರಲ್ಲಿ ಸಾಲ ಪಡೆದುಕೊಂಡಿದ್ದ ರೈತ ಕುಟುಂಬವೊಂದು, ಬಳಿಕ ಸಾಲ ಕಟ್ಟದೇ ಇದ್ದುದರಿಂದ ಸಾಲ ವಸೂಲಾತಿಗೆಂದು ಮನೆಗೆ ಬಂದ ಖಾಸಗಿ ಫೈನಾನ್ಸ್ ಕಂಪನಿ ಏಜೆಂಟರು ಹಾಗೂ ರೈತನ ನಡುವೆ ವಾಗ್ವಾದ ನಡೆದಿದ್ದು, ಇದರಿಂದ ಕೋಪಗೊಂಡ ಏಜೆಂಟ್ ರೈತನ​ ಮನೆಯಲ್ಲಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆಯಲು ಮುಂದಾಗಿದ್ದಾನೆ. ಈ ವೇಳೆ ರೈತನ ಮೂರು ತಿಂಗಳ ಗರ್ಭಿಣಿ ಮಗಳು ಟ್ರ್ಯಾಕ್ಟರ್ ಮುಂದೆ ಅಡ್ಡ ಬಂದಿದ್ದು, ಆದರೆ ಆಕೆಯನ್ನು ಲೆಕ್ಕಿಸದ ಏಜೆಂಟ್ ಆಕೆಯ ಮೇಲೆಯೇ ಟ್ರ್ಯಾಕ್ಟರ್ ಹರಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್ ಹಾಗೂ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

Also Read  ➤ಪ್ರವಾಸಿ ಮಂದಿರದಲ್ಲಿ PWD ಅಧಿಕಾರಿ ಆತ್ಮಹತ್ಯೆ!

error: Content is protected !!
Scroll to Top