ತಾಯಿ ತನಗಿಷ್ಟವಾದ ಆಹಾರ ನೀಡಿಲ್ಲವೆಂದು ಬಾಲಕಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಡೆಹ್ರಾಡೂನ್, ಸೆ. 18. ತನ್ನಿಷ್ಟದ ಆಹಾರವನ್ನು ತಾಯಿ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ರಾಯಪುರದ ದಾದಾ ಲಕ್ಹ್ಕೊಂಡ್ ಪ್ರದೇಶದಲ್ಲಿ ನಡೆದಿದೆ.


16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದವಳು. ಈಕೆ ತಾಯಿ ತನಗಿಷ್ಠವಾದ ಆಹಾರವನ್ನು ತಯಾರಿಸಿ ಕೊಟ್ಟಿಲ್ಲವೆಂದು ತಾಯಿಯೊಂದಿಗೆ ಗಲಾಟೆ ಮಾಡಿದ್ದು, ಅಲ್ಲದೇ ತಾಯಿ ನೀಡಿದ ಆಹಾರವನ್ನು ಸೇವಿಸಲು ನಿರಾಕರಿಸಿದ್ದಾಳೆ. ಬಳಿಕ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು, ಎಷ್ಟೊತ್ತಾದರೂ ಆಕೆ ಬಾಗಿಲು ತೆರೆಯದ ಕಾರಣ ತಾಯಿಯು, ಬಾಗಿಲು ಒಡೆದು ಒಳಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು ಎನ್ನಲಾಗಿದೆ.

Also Read  ಬಹರೈನ್ ಕೆ.ಸಿ.ಎಫ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ► ಝೈನುಲ್ ಉಲಮಾ ಮಾಣಿ ಉಸ್ತಾದರಿಗೆ ಸನ್ಮಾನ ಸಮಾರಂಭ

error: Content is protected !!
Scroll to Top