ದ.ಕ.ದಲ್ಲಿ ಸೆ. 26ರಿಂದ ಅ. 10ರ ವರೆಗೆ ದಸರಾ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ. 26ರಿಂದ ಅಕ್ಟೋಬರ್‌ 10ರ ವರೆಗೆ ದಸರಾ ರಜೆ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಆದೇಶ ಹೊರಡಿಸಿದ್ದಾರೆ. ರಜೆಯ ಕುರಿತು ಶಾಸಕ ವೇದವ್ಯಾಸ್‌ ಕಾಮತ್‌ ರವರು ಹಬ್ಬಕ್ಕೆ ಪೂರಕವಾಗುವಂತೆ ರಜೆ ನೀಡಲು ಮನವಿ ಮಾಡಿಕೊಂಡಿದ್ದ ಹಿನ್ನೆಲೆ, ಸ್ಪಂದಿಸಿದ ಸಚಿವರು ಅ. 2ರ ಗಾಂಧಿ ಜಯಂತಿ ದಿನವನ್ನು ಹೊರತುಪಡಿಸಿ ದಸರಾ ರಜೆ ನೀಡುವಂತೆ ಸೂಚಿಸಿದ್ದಾರೆ.


ಈ ಕುರಿತು ಮಾತನಾಡಿದ ಶಾಸಕ ಕಾಮತ್‌, ಸೆ. 26ರಿಂದ ನವರಾತ್ರಿ ಪ್ರಾರಂಭವಾಗುತ್ತಿದ್ದು, ಅದ್ದೂರಿಯಾಗಿ ನಡೆಯುವ ಮಂಗಳೂರು ದಸರಾ, ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ರಥಬೀದಿ ಶಾರದಾ ಮಹೋತ್ಸವ, ಮಂಗಳಾದೇವಿ ದೇವಸ್ಥಾನದ ನವರಾತ್ರಿ ಸೇರಿದಂತೆ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮದಲ್ಲಿ
ಹಬ್ಬವನ್ನು ಆಚರಿಸಲಾಗುತ್ತದೆ. ಆದ್ದರಿಂದ ರಜೆಯನ್ನು ಹಬ್ಬದ ಸಂದರ್ಭದಲ್ಲಿಯೇ ನೀಡುವಂತೆ ಮನವಿ ಮಾಡಿದ್ದೆವು ಎಂದರು.

Also Read  ಹಿಜಾಬ್ ವಿವಾದ- ಮತ್ತೆ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹೈಕೋರ್ಟ್...!

ಉಡುಪಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಅಕ್ಟೋಬರ್‌ 3ರಿಂದ 16ರ ವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗುತ್ತಿದ್ದು, ಮಂಗಳೂರಿನಲ್ಲಿ ಸ್ಥಳೀಯ ಶಾಸಕರ ಮನವಿಯಂತೆ ರಜೆ ದಿನಾಂಕ ಬದಲಾವಣೆ ಮಾಡಲಾಗಿದೆ.

error: Content is protected !!
Scroll to Top