ಬಿಸಿಲಿನ ತಾಪ ತಾಳಲಾರದೇ ಶಾಲಾ ಬಸ್ ನಲ್ಲೇ ನಿದ್ರೆಗೆ ಜಾರಿದ ಮಗು ಮೃತ್ಯು ➤‌ ಹುಟ್ಟುಹಬ್ಬದ ದಿನವೇ ದುರಂತ

(ನ್ಯೂಸ್ ಕಡಬ) newskadaba.com ದೋಹಾ, ಸೆ. 12. ನಾಲ್ಕು ವರ್ಷದ ಮಗುವೊಂದು ಶಾಲಾ ಬಸ್ಸಿನೊಳಗೆ ನಿದ್ರೆಗೆ ಜಾರಿದ್ದು, ತೀವ್ರ ಬಿಸಿಲಿನ ತಾಪದಿಂದ ಮೃತಪಟ್ಟ ಘಟನೆ ಕತಾರ್ ನಲ್ಲಿ ನಡೆದಿದೆ.


ಮೃತ ಮಗುವನ್ನು ಕೊಟ್ಟಾಯಂ ಅಭಿಲಾಷ್ ಚಾಕೋ ಮತ್ತು ಸೌಮ್ಯ ದಂಪತಿಯ ಕಿರಿಯ ಪುತ್ರಿ ಮಿನ್ಸಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಹುಟ್ಟುಹಬ್ಬದಂದೇ ದುರಂತವಾಗಿ ಸಾವಿಗೀಡಾಗಿದ್ದಾಳೆ. ಕತಾರಿನ ಅಲ್ವಾಕ್ರಾ ಪ್ರದೇಶದ ಸ್ಪ್ರಿಂಗ್ಫೀಲ್ಡ್ ಕಿಂಡರ್ಗಾರ್ಟನ್ ನಲ್ಲಿ ಕಲಿಯುತ್ತಿದ್ದ ಮಿನ್ಸಾ ಎಂದಿನಂತೆ ಶಾಲಾ ಬಸ್ ನಲ್ಲಿ ಶಾಲೆಗೆ ತೆರಳಿದ್ದು, ಬಸ್ಸಿನಲ್ಲೇ ನಿದ್ರೆಗೆ ಜಾರಿದ್ದಳು. ಬಸ್ ಸಿಬ್ಬಂದಿಯು ಇತರ ಮಕ್ಕಳನ್ನು ಬಸ್ಸಿನಿಂದ ಇಳಿಸಿ ಶಾಲೆಗೆ ಕರೆದೊಯ್ದರಾದರೂ, ಬಸ್ಸಿನ ಸೀಟಿನಲ್ಲಿ ಮಲಗಿದ್ದ ಮಿನ್ಸಾ ಅವರನ್ನು ಗಮನಿಸಲಿಲ್ಲ. ಮಕ್ಕಳನ್ನು ಇಳಿಸಿದ ನಂತರ, ನೌಕರರು ಬಸ್ಸಿಗೆ ಬೀಗ ಹಾಕಿ ತೆರಳಿದ್ದಾರೆ ಎನ್ನಲಾಗಿದೆ. ಕತಾರ್ ನಲ್ಲಿ ತೀವ್ರ ಶಾಖವನ್ನು ತಾಳಿಕೊಳ್ಳಲು ಸಾಧ್ಯವಾಗದ ಕಾರಣ ಮಗು ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದ್ದು, ಸಿಬ್ಬಂದಿಗಳು ಮಧ್ಯಾಹ್ನ ಮಕ್ಕಳನ್ನು ಕರೆದೊಯ್ಯಲು ಬಸ್ ಹತ್ತಲು ಬಂದಾಗ, ಬಸ್ಸಿನೊಳಗೆ ಮಗು ಸಿಕ್ಕಿಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

Also Read  ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

 

error: Content is protected !!
Scroll to Top