ಮಂಗಳೂರು: ಬೆಳ್ಳಂಬೆಳಗ್ಗೆ ಎಸ್ಡಿಪಿಐ ನಾಯಕನ ಮನೆಮೇಲೆ ಎನ್ಐಎ ದಾಳಿ ➤ ಸ್ಥಳದಲ್ಲಿ ಕಾರ್ಯಕರ್ತರ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 08. ದ.ಕ ಜಿಲ್ಲೆಯಲ್ಲಿ ಎನ್ಐಎ ದಾಳಿ ಮುಂದುವರಿದಿದ್ದು, ಎಸ್ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ ಗುರುವಾರ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.

ಈಗಾಗಲೇ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಸೆಪ್ಟೆಂಬರ್ 6 ರಂದು ಸುಳ್ಯ, ಪುತ್ತೂರು ಸೇರಿದಂತೆ 30 ಕಡೆ ದಾಳಿ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ ಎಸ್ಡಿಪಿಐ ರಾಷ್ಟ್ರೀಯ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ ಎನ್ಐಎ ದಾಳಿ ನಡೆಸಿದ್ದು, ಇದನ್ನು ವಿರೋಧಿಸಿ ಮನೆಮುಂದೆ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Also Read  ಬಂದ್ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತ ► ಬಸ್ ಸಂಚಾರವಿಲ್ಲದೆ ಪರದಾಡಿದ ಪ್ರಯಾಣಿಕರು

error: Content is protected !!
Scroll to Top