(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 07. ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 55.39 ಲಕ್ಷ ರೂ ಮೌಲ್ಯದ ಚಿನ್ನ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡ ಘಟನೆ ಇಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರದಿಯಾಗಿದೆ.
ಸೋಮವಾರದಂದು ದುಬೈನಿಂದ ಬಂದಿದ್ದ ಮೂವರು ಚಪ್ಪಲಿ ಮತ್ತು ಬನಿಯಾನ್ ನಲ್ಲಿ ಪೇಸ್ಟ್ ರೂಪದಲ್ಲಿ 24 ಕ್ಯಾರೆಟ್ ಪರಿಶುದ್ದತೆಯ 897 ಗ್ರಾಂ. ತೂಕದ 45,65,730 ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದರು. ಮತ್ತೊಂದು ಪ್ರಕರಣದಲ್ಲಿ ಮಂಗಳವಾರದಂದು ದುಬೈನಿಂದ ಬಂದಿದ್ದ ಕಾಸರಗೋಡಿನ ವ್ಯಕ್ತಿ 9.74 ಲಕ್ಷ ರೂ. ಮೌಲ್ಯದ 190.250 ಗ್ರಾಂ. ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.