ಕಡಬ: ನೂತನ ತಹಶೀಲ್ದಾರ್ ಆಗಿ ರಮೇಶ್ ಕುಮಾರ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಸೆ. 06. ಪುತ್ತೂರಿನಿಂದ ವರ್ಗಾವಣೆಗೊಂಡಿದ್ದ ತಹಶೀಲ್ದಾರ್ ರಮೇಶ್ ಬಾಬು ಅವರನ್ನು ಕಡಬ ತಾಲೂಕಿಗೆ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

2020 ರಲ್ಲಿ ಮೈಸೂರಿನಿಂದ ಪುತ್ತೂರು ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ರಮೇಶ್ ಬಾಬು ಅವರು, 2022ರ ಜೂನ್ ತಿಂಗಳಲ್ಲಿ ವರ್ಗಾವಣೆಗೊಂಡಿದ್ದರು. ಆದರೆ ಅವರಿಗೆ ಸ್ಥಳ ನಿಗದಿಪಡಿಸದೇ ಇದ್ದುದರಿಂದ, ಇದೀಗ ಅವರನ್ನು ಕಡಬ ತಹಶೀಲ್ದಾರ್ ಅಗಿ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸರಕಾರದ ಅಧಿಕೃತ ಆದೇಶ ಇನ್ನಷ್ಟೆ ಬರಬೇಕಿದೆ.

Also Read  ವಿದ್ಯಾರ್ಥಿ ಪೋಷಕರಿಂದ ಬಲಾತ್ಕಾರವಾಗಿ ಶುಲ್ಕ ವಸೂಲು ಮಾಡುವಂತಿಲ್ಲ ➤ ಪುತ್ತೂರು ಶಿಕ್ಷಣಾಧಿಕಾರಿಯಿಂದ ಖಡಕ್ ಎಚ್ಚರಿಕೆ

error: Content is protected !!
Scroll to Top