ಕಾರಿನಲ್ಲೇ ಹೃದಯಾಘಾತ- ಬಿಜೆಪಿ ಶಾಸಕ ನಿಧನ

(ನ್ಯೂಸ್ ಕಡಬ) newskadaba.com ಲಕ್ನೋ, ಸೆ. 06. ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಅರವಿಂದ್ ಗಿರಿ(65) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶಾಸಕ ಅರವಿಂದ್ ಅವರು ಇಂದು ಬೆಳಗ್ಗೆ ಲಕ್ನೋ ಗೆ ತೆರಳುತ್ತಿದ್ದ ವೇಳೆ ತಮ್ಮ ಕಾರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅರವಿಂದ್ ಗಿರಿ 1993 ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿ 2006 ರಲ್ಲಿ ಎಸ್ ಪಿ ಅಭ್ಯರ್ಥಿಯಾಗಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಶಾಸಕ ಅರವಿಂದ್ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.

Also Read  ಕ್ವಾರ್ಟರ್ಸ್ ಮೇಲೆ ಮಲಗಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು

error: Content is protected !!
Scroll to Top