ಮಗುವಿಗೆ ಜನ್ಮವಿತ್ತು ಆವರಣಗೋಡೆಯ ಬಳಿ ಉಪೇಕ್ಷಿಸಿದ ಪಿಯುಸಿ ವಿದ್ಯಾರ್ಥಿನಿ ➤ ಎಸ್ಸೆಸ್ಸೆಲ್ಸಿ ಬಾಲಕನ ಬಂಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಸೆ. 06. ಎಸ್ಸೆಸ್ಸೆಲ್ಸಿ ಬಾಲಕನಿಂದ ಗರ್ಭಿಣಿಯಾದ ಪಿಯುಸಿ ವಿದ್ಯಾರ್ಥಿನಿಯು, ಜನನವಾದ ಬಳಿಕ ಮಗುವನ್ನು ಶಾಲೆಯ ಪಕ್ಕದ ಆವರಣ ಗೋಡೆಯ ಬಳಿ ಬಿಟ್ಟುಹೋದ ಘಟನೆ ತಮಿಳು ನಾಡಿನ ಕಡಲೂರು ಜಿಲ್ಲೆಯ ಭುವನಗಿರಿಯಲ್ಲಿ‌ ನಡೆದಿದೆ.

ಶಾಲಾ ಆವರಣದ ಬಳಿ ನವಜಾತ ಶಿಶುವನ್ನು ಗಮನಿಸಿದ ವಿದ್ಯಾರ್ಥಿನಿಯೋರ್ವಳು ಶಿಕ್ಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಶಿಶುವಿನ ಹೊಕ್ಕುಳ ಬಳ್ಳಿ ಸರಿಯಾದ ರೀತಿಯಲ್ಲಿ ತುಂಡರಿಸಿರದಿಂದ, ಶಾಲಾ ವಿದ್ಯಾರ್ಥಿನಿಯರ ಪೈಕಿ ಯಾರೋ ಈ ಕೃತ್ಯ ನಡೆಸಿರಬಹುದೆಂದು ಪ್ರಾಥಮಿಕ ತಿನಿಖೆಯಲ್ಲಿ ಊಹಿಸಿದ ಪೊಲೀಸರು, ತನಿಖೆ ನಡೆಸಿದಾಗ ಅದೇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶಾಲೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿ, ಬಳಿಕ ಆವರಣ ಗೋಡೆಯ ಬಳಿ ಉಪೇಕ್ಷಿಸಿ ಹೋದ ಆತಂಕಕಾರಿ ವಿಷಯ ಹೊರಬಂದಿದೆ. ವಿದ್ಯಾರ್ಥಿನಿ ಗರ್ಭಿಣಿಯಾಗಲು ಮತ್ತೊಂದು ಶಾಲೆಯ ಹತ್ತನೇ ತರಗತಿಯ ಬಾಲಕ ಕಾರಣ ಎಂದು ತಿಳಿದುಬಂದಿದ್ದ, ಆತನ ವಿರುದ್ಧ ಫೋಕ್ಸೋ ಮತ್ತಿತರ ಕಲಂ ಅಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಕಡಬ: ಕೆಲಸ ಸಿಗದೇ ಬೇಸತ್ತ ಯುವತಿ ಆತ್ಮಹತ್ಯೆ

error: Content is protected !!
Scroll to Top