ಉಪ್ಪಳ: ದಿ.ಶರೀಫ್ ಅರಿಬೈಲು ಸ್ಮರಣಾರ್ಥ ಯೂತ್ ಕಾಂಗ್ರೆಸ್ ರಕ್ತದಾನ ಶಿಬಿರ ಉದ್ಘಾಟನೆ ➤ ರಕ್ತದಾನವು ಮಹಾಶ್ರೇಷ್ಠ ದಾನವಾಗಿದೆ- ರಾಜ್ ಮೋಹನ್ ಉಣ್ಣಿತ್ತಾನ್

(ನ್ಯೂಸ್ ಕಡಬ) newskadaba.com ಉಪ್ಪಳ, ಸೆ. 06. ಎಲ್ಲ ದಾನಗಳಿಗಿಂತ ಸಮಾಜದಲ್ಲಿ ರಕ್ತದಾನ ಶ್ರೇಷ್ಠದಾನವಾಗಿದೆ. ಅಮೂಲ್ಯ ಜೀವ ಉಳಿಸಲು ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕರೆ ನೀಡಿದ್ದಾರೆ. ಅವರು ಉಪ್ಪಳದಲ್ಲಿ ಯೂತ್ ಕಾಂಗ್ರೆಸ್ ಅಸೆಂಬ್ಲಿ ಸಮಿತಿ ವತಿಯಿಂದ ಜರುಗಿದ ದಿ.ಶರೀಫ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

 

ಶರೀಫ್ ಅರಿಬೈಲು ಯೂತ್ ಕಾಂಗ್ರೆಸ್ ನ ಕ್ರೀಯಾಶೀಲ ಯುವಕನಾಗಿದ್ದ, ಸರ್ವರ ಮನಗೆದ್ದ ಆ ಯುವಕನ ಅಕಾಲಿಕ ಮರಣ ಸರ್ವರನ್ನೂ ದು:ಖಕ್ಕೀಡುಮಾಡಿದೆ. ಇಂತಹ‌ ಸಮಾಜಮುಖಿ ಕಾರ್ಯಕ್ರಮಗಳಿಂದ ಆತನ ಸ್ಮರಣೆ ಜೀವಂತಗೊಳಿಸಬೇಕು ಎಂದು ಅವರು ಹೇಳಿದರು. ಯೂತ್ ಕಾಂಗ್ರೆಸ್ ಅಸೆಂಬ್ಲಿ ಸಮಿತಿ ಅಧ್ಯಕ್ಷ ಜುನೈದ್ ಉರ್ಮಿ ಅಧ್ಯಕ್ಷತೆ‌ ವಹಿಸಿದ್ದರು. ಶಿಬಿರದ ಸಂಚಾಲಕ ಆರಿಫ್ ಮಚ್ಚಂಪಾಡಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯೆ ಕಮಲಾಕ್ಷಿ.ಕೆ, ಖ್ಯಾತ ವೈದ್ಯ ಡಾ.ಮೊಯಿದಿನ್ ನಫ್ಸೀರ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಶರೀಫ್ ಅರಿಬೈಲು ತಂದೆ ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಮಾಲೂಫ ಕಯ್ಯಾಂಕೂಡೇಲ್, ಖದೀಜತುಲ್ ಬರೀರ ಕಂಚಿಲ, ಡಾ. ನಜೀಬ್ ಉಪ್ಪಳ‌ ಎಂಬವರನ್ನ ಸನ್ಮಾನಿಸಲಾಯಿತು. ಮಹಿಳಾ ರಕ್ತದಾನದಾನಿಗಳಾದ ಕಮಲಾಕ್ಷಿ.ಕೆ, ಶರ್ಮಿಳಾ ಪಿಂಟೋ, ಶೈಲಜಾ ಕಳಿಯೂರು ಇವರಿಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಐಎನ್ ಟಿಯುಸಿ ಬ್ಲಾಕ್ ಅಧ್ಯಕ್ಷ ಸತ್ಯನ್.ಸಿ. ಉಪ್ಪಳ, ಮುಖಂಡರಾದ ಕಂಚಿಲ ಮೊಹಮ್ಮದ್, ಶಾನಿದ್ ಕಯ್ಯಾಂಕೂಡೆಲ್, ಖಲೀಲ್ ಬಜಾಲ್, ವಿನೋದ್ ಕುಮಾರ್ ಪಾವೂರು, ಓಂಕೃಷ್ಣ, ನವೀನ್ ಶೆಟ್ಟಿ ಮಂಗಲ್ಪಾಡಿ, ಅಝೀಝ್ ಕಲ್ಲೂರು, ಮಂಜುನಾಥ ಪ್ರಸಾದ್ ರೈ, ಶರೀಲ್ ಕಯ್ಯಾಂಕೂಡೇಲ್, ರಜತ್ ವೇಗಸ್, ಸುಲೈಮಾನ್ ಪುತ್ತಿಗೆ, ಸದಾಶಿವ ಕೆ, ಝಕರಿಯಾ ಶಾಲಿಮಾರ್, ಹಸೈನಾರ್ ಅಹಮದ್, ಲಕ್ಷ್ಮಣ ಉಪ್ಪಳ, ಸಲೀಂ ಪುತ್ತಿಗೆ, ಮನ್ಸೂರ್ ಬಿ.ಎಂ, ಹುಸೈನ್ ಕುಬಣೂರು, ಇರ್ಷಾದ್ ಮಂಜೇಶ್ವರ, ತಮೀಮ್ ಮಂಜೇಶ್ವರ, ರಝಾಕ್ ಹೊಸಂಗಡಿ, ಕಿಶೋರ್ ಮಂಗಲ್ಪಾಡಿ, ಅಬೂಬಕ್ಕರ್ ನವಾಝ್, ಇಂಬು ತಲೇಕಳ, ಜಗದೀಶ್ ಮೂಡಂಬೈಲು, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಮೊಯಿನ್ ಪೂನ, ರಫೀಕ್ ಕುಂಡಾರು, ಅನಸ್ ಇಡಿಯಾ , ಅಬೂ ಸಾಲಿ ಮುರತ್ತಣೆ, ಹನೀಫ್ ಎಚ್.ಎ, ಮೊಹಮ್ಮದ್ ಪುತ್ತಿಗೆ, ರವಿರಾಜ್ ಕುಂಬಳೆ, ನೌಫಲ್ ಪೈವಳಿಕೆ, ಹನೀಫ್ ಮಂಜೇಶ್ವರ, ಶಾರೂನ್, ರಾಝೀ ಕಯ್ಯುಂಕೂಡೇಲ್, ಯಾಕೂಬ್ ಕೋಡಿ, ಇಲ್ಯಾಸ್‌ ಶಹೀದ್, ಮೊಹಮ್ಮದ್ ಕತ್ತರಿಕೋಡಿ, ಇಸ್ಮಾಯಿಲ್, ನಾಸಿರಾ ಇಸ್ಮಾಯಿಲ್, ಆರೀಫಾ ಕಲ್ಲೂರು, ಹಮೀದ್ ಕಣಿಯೂರು, ಪಂ. ಸದಸ್ಯರಾದ ಕೇಶವ, ಅವಿನಾಶ್ ಡಿ.ಸೋಜಾ, ನರಿಂಗಾನ ಪಂ.ಉಪಾಧ್ಯಕ್ಷ ನವಾಜ್ ಕಲ್ಲರಕೋಡಿ, ಅಬ್ದುಲ್ಲ ಕಡಂಬಾರ್, ಲತೀಫ್ ಮೀಯಾಪದವು, ಮುಂತಾದವರು ಉಪಸ್ಥಿತರಿದ್ದರು. ಮುಸ್ಲಿಂ ಲೀಗ್ ನೇತಾರರಾದ ಮೂಸಾ ಟಿ.ಎ, ಅಝೀಝ್ ಮರಿಕೆ, ಸಲೀಂ ಉಪ್ಪಳ, ಯೂಸುಫ್ ಬಂದ್ಯೋಡು, ಅಲಿ ಮಾಸ್ತರ್, ಅಬ್ಬಾಸ್ ಓಣಂದ, ಮಾದೇರಿ ಅಬ್ಬುಲ್ಲ, ಅಶ್ರಫ್ ಓ.ಎ, ಅಝೀಂ ಮಣಿಮುಂಡ, ಅಪೋಲೋ ಉಮರ್, ಹುಸೈನ್ ಮಚ್ಚಂಪಾಡಿ, ಉಂಬಾಯಿ ಮಂಗಲ್ಪಾಡಿ, ಮಜೀದ್ ಮಚ್ಚಂಪಾಡಿ ಆಗಮಿಸಿ ಶುಭ ಹಾರೈಸಿದರು. ರಕ್ತದಾನ ಶಿಬಿರದಲ್ಲಿ 120 ಮಂದಿ ದಾನಿಗಳು ರಕ್ತದಾನಗೈದರು.

Also Read  ಅಘನಾಶಿನಿ ಒಡಲಿಗೆ ಮತ್ತೆ ಕುತ್ತು

 

error: Content is protected !!
Scroll to Top