ಪುತ್ತೂರು: ಸ್ಕೂಟರ್ ಹಾಗೂ ಕಾರು ನಡುವೆ ಢಿಕ್ಕಿ ➤ ಸ್ಕೂಟರ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 04. ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಸಮೀಪ ಶನಿವಾರದಂದು ತಡರಾತ್ರಿ ಸಂಭವಿಸಿದೆ.

ಗಂಭೀರ ಗಾಯಗೊಂಡವರನ್ನು ಮುಂಡೂರು ಕಂಪ ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿದ್ದ ಕಾರು ಮತ್ತು ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಸ್ಕೂಟರ್‌ನಲ್ಲಿದ್ದ ವಿನೋದ್ ಮತ್ತು ದೀಕ್ಷಿತ್ ಕಾರಿನ ಬೊನೆಟ್ ಮೇಲೆ ಬಿದ್ದು ಗಾಯಗೊಂಡಿದ್ದಾರೆ.

Also Read  The Benefits of Online Board Management

error: Content is protected !!
Scroll to Top