ಅ. 24ರಿಂದ iOS 10 ಐಫೋನ್ ಮಾಡೆಲ್ ಗಳಲ್ಲಿ ವ್ಹಾಟ್ಸಾಪ್ ಕೆಲಸ ಮಾಡಲ್ಲ…!!!

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 03. ಅಕ್ಟೋಬರ್ 24 ರಿಂದ iOS 10 ಅಥವಾ iOS 11 ಆವೃತ್ತಿಯ ಐಫೋನ್ ಮಾಡೆಲ್ ಗಳಲ್ಲಿ ಇನ್ನು ಮುಂದೆ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.


ವಾಟ್ಸ್ ಆ್ಯಪ್ ಬೇಕಾದರೆ ಹಳೆಯ ಐಫೋನ್ ಹೊಂದಿರುವವರು ತಮ್ಮ ಮೊಬೈಲ್ ಗಳನ್ನು iOS 12 ಅಥವಾ ಅದಕ್ಕೂ ಹೆಚ್ಚಿನ ಆವೃತ್ತಿಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂದರೆ iOS 10 ಅಥವಾ iOS 11 ಮಾಡೆಲ್ ಗಳನ್ನು ಬಳಸುತ್ತಿರುವವರು ಇನ್ಮುಂದೆ ಹೊಸ ಫೋನ್ ಖರೀದಿಸಬೇಕಾಗುತ್ತದೆ. ಈ ಹಳೆಯ ಮಾಡೆಲ್ ಗಳನ್ನು ಹೊಸ iOS ಸಾಫ್ಟವೇರ್ ಗೆ ಅಪ್ಡೇಟ್ ಮಾಡುವುದು ವಾಸ್ತವಿಕವಾಗಿ ಕಷ್ಟಕರವಾಗಿದೆ. iPhone 5s ಅಥವಾ ನಂತರದ ಮಾದರಿಗಳನ್ನು ಹೊಂದಿರುವ ಬಳಕೆದಾರರು iOS 12 ಗೆ ನವೀಕರಿಸಿ ವಾಟ್ಸ್ಆ್ಯಪ್ ಬಳಕೆಯನ್ನು ಮುಂದುವರಿಸಬಹುದಾಗಿದೆ.

Also Read  ಉಪ್ಪಿನಂಗಡಿ: ಹೊಂಡಕ್ಕೆ ಬಿದ್ದ ಕಾರು ➤ ಚಾಲಕ ಅಪಾಯದಿಂದ ಪಾರು

error: Content is protected !!
Scroll to Top