ಸ್ನೇಹಿತರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಚೂರಿ ಇರಿತ ➤ ಯುವಕ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 03. ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಕಾರ್ಕಳದ ಮಾಳ ಎಂಬಲ್ಲಿ ನಡೆದಿದೆ.

ಚೂರಿ ಇರಿತಕ್ಕೊಳಗಾದವನನ್ನು ನಾಗರಾಜ್ ಪೂಜಾರಿ ಎಂದು ಗುರುತಿಸಲಾಗಿದೆ. ಭರತ್ ಎಂಬಾತ ಚೂರಿಯಿಂದ ಇರಿದ ಆರೋಪಿ. ಇವರಿಬ್ಬರು ಆತ್ಮೀಯ ಸ್ನೇಹಿತರಾಗಿದ್ದು, ಭರತ್ ಎಂಬಾತನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದಕ್ಕೆ ನಾಗರಾಜ್ ಪೂಜಾರಿಯು ಚೂರಿಯನ್ನು ಕೈಯಲ್ಲಿ ಹಿಡಿದುಕೊಳ್ಳಬೇಡ ಎಂದು ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಭರತನು ಕೈಯಲ್ಲಿದ್ದ ಚೂರಿಯಿಂದ ನಾಗರಾಜ್ ಹೊಟ್ಟೆಯ ಬಲಭಾಗಕ್ಕೆ ಇರಿದಿದ್ದಾನೆ. ಗಾಯಗೊಂಡ ನಾಗರಾಜ್ ನನ್ನು ಕೂಡಲೇ ಕಾರ್ಕಳ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪರಿಶೀಲಿಸಿದ ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ ನಿನ್ನೆ ವಾಪಸ್ಸು ನೋವು ಉಂಟಾಗಿದ್ದು, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕರ್ನಾಟಕದಲ್ಲೇ ಮೊದಲ ಬಾರಿ ಅರಣ್ಯದಲ್ಲಿ ಪಕ್ಷಿ ಗಣತಿ!

 

error: Content is protected !!
Scroll to Top